×
Ad

ಲೈಂಗಿಕ ಕಿರುಕುಳ ಆರೋಪ: ದೇವಳದ ಅರ್ಚಕನ ವಿರುದ್ಧ ಪ್ರಕರಣ ದಾಖಲು

Update: 2018-07-20 19:17 IST

ಪಣಜಿ, ಜು.20: ಮುಂಬೈ ಮೂಲದ ಮಹಿಳೆಯ ದೂರಿನ ಹಿನ್ನೆಲೆಯಲ್ಲಿ ಗೋವಾದ ಪ್ರಸಿದ್ಧ ಮಂಗೇಶಿ ದೇವಳದ ಅರ್ಚಕನ ವಿರುದ್ಧ ಲೈಂಗಿಕ ಪೀಡನೆಯ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಾನು ಜೂನ್ 14ರಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ಅರ್ಚಕ ಧನಂಜಯ ಭಾವೆ ಎಂಬಾತ ತನ್ನನ್ನು ಅಪ್ಪಿಹಿಡಿದು ಮುತ್ತಿಕ್ಕಿದ್ದಾನೆ ಎಂದು ಮುಂಬೈ ಮೂಲದ, ಈಗ ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿರುವ ಮಹಿಳೆ ಇ-ಮೇಲ್ ಮೂಲಕ ನೀಡಿದ ದೂರಿನ ಆಧಾರದಲ್ಲಿ ಐಪಿಸಿಯ ಸೆಕ್ಷನ್ 354ರಡಿ ಭಾವೆ ವಿರುದ್ಧ ಲೈಂಗಿಕ ಪೀಡನೆ ಪ್ರಕರಣ ದಾಖಲಿಸಲಾಗಿದೆ ಎಂದು ಪೋಂಡದ ಡಿಎಸ್‌ಪಿ ಮಹೇಶ್ ಗಾಂವ್ಕರ್ ತಿಳಿಸಿದ್ದಾರೆ.

 ಇದಕ್ಕೂ ಮುನ್ನ ಮಹಿಳೆ ಅರ್ಚಕನ ವಿರುದ್ಧ ದೇವಳದ ಆಡಳಿತ ಸಮಿತಿಗೆ ದೂರು ನೀಡಿದ್ದರು. ಜುಲೈ 4ರಂದು ತುರ್ತು ಸಭೆ ನಡೆಸಿದ್ದ ಸಮಿತಿ ದೂರಿನ ವಿಚಾರಣೆ ನಡೆಸಿ ಪ್ರಾಥಮಿಕ ತನಿಖೆ ನಡೆಸಲು ನಿರ್ಧರಿಸಿತ್ತು. ಆದರೆ ಪ್ರಾಥಮಿಕ ತನಿಖೆಯಲ್ಲಿ ಅರ್ಚಕನ ವಿರುದ್ಧದ ಆರೋಪವನ್ನು ಸಾಬೀತುಪಡಿಸಲು ಯಾವುದೇ ಪುರಾವೆ ಲಭಿಸದ ಕಾರಣ ಸೂಕ್ತ ಪ್ರಾಧಿಕಾರಕ್ಕೆ ದೂರು ನೀಡುವಂತೆ ಸಮಿತಿ ಮಹಿಳೆಗೆ ತಿಳಿಸಿತ್ತು. ಇದುವರೆಗೂ ಆರೋಪಿಯನ್ನು ಬಂಧಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News