ಸಿಂಗಾಪುರದ ಪ್ರಧಾನಿ, 15 ಲಕ್ಷ ಪ್ರಜೆಗಳ ಆರೋಗ್ಯ ಮಾಹಿತಿಗೆ ಕನ್ನ

Update: 2018-07-20 16:54 GMT

ಸಿಂಗಾಪುರ, ಜು. 20: ಸಿಂಗಾಪುರ ಪ್ರಧಾನಿ ಲೀ ಹಸಿಯನ್ ಲೂಂಗ್ ಸೇರಿದಂತೆ ಸುಮಾರು 15 ಲಕ್ಷ ಸಿಂಗಾಪುರ ಪ್ರಜೆಗಳಿಗೆ ಸೇರಿದ ಆರೋಗ್ಯ ದಾಖಲೆಗಳನ್ನು ಆನ್‌ಲೈನ್ ಕನ್ನಗಾರರು ಕದ್ದಿದ್ದಾರೆ.

ಇದು ಸಿಂಗಾಪುರದ ಅತಿ ದೊಡ್ಡ ಆನ್‌ಲೈನ್ ಕಳ್ಳತನವಾಗಿದೆ.

‘‘ಉದ್ದೇಶಪೂರ್ವಕ ಹಾಗೂ ವಿವರವಾಗಿ ರೂಪಿಸಿದ’’ ದಾಳಿಯಲ್ಲಿ ಸರಕಾರಿ ಮಾಹಿತಿಕೋಶವೊಂದರ ಮೇಲೆ ದಾಳಿ ನಡೆಸಲಾಗಿದೆ ಎಂದು ಸಿಂಗಾಪುರದ ಆರೋಗ್ಯ ಮತ್ತು ವಾರ್ತಾ ಸಚಿವಾಲಯಗಳು ಹೇಳಿವೆ.

ಅದೇ ವೇಳೆ, ಈ ದಾಳಿಯನ್ನು ‘ಅಭೂತಪೂರ್ವ’ ಎಂಬುದಾಗಿ ಅವು ಬಣ್ಣಿಸಿವೆ.

‘‘ಕನ್ನಗಾರರು ನಿರ್ದಿಷ್ಟವಾಗಿ ಹಾಗೂ ಪದೇ ಪದೇ ಪ್ರಧಾನಿ ಲೀ ಹಸಿಯನ್ ಲೂಂಗ್‌ರ ವೈಯಕ್ತಿಕ ಮಾಹಿತಿಗಳು ಮತ್ತು ಹೊರರೋಗಿ ಮಾಹಿತಿಗಳನ್ನು ಕದ್ದಿದ್ದಾರೆ’’ ಎಂದು ಆರೋಗ್ಯ ಸಚಿವ ಗಾನ್ ಕಿಮ್ ಯೊಂಗ್ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದರು.

ಸರಕಾರಿ ಮಾಹಿತಿಕೋಶಗಳು ಮತ್ತು ಅಗತ್ಯ ಸೇವೆಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆಯನ್ನು ಸಿಂಗಾಪುರ ಈಗಾಗಲೇ ಆರಂಭಿಸಿರುವುದನ್ನು ಸ್ಮರಿಸಬಹುದಾಗಿದೆ.

2017ರಲ್ಲಿ ಕನ್ನಗಾರರು ರಕ್ಷಣಾ ಸಚಿವಾಲಯದ ಮಾಹಿತಿಕೋಶಕ್ಕೆ ಕನ್ನಹಾಕಿ, 850 ಸೇನಾ ನಿಯುಕ್ತರು ಮತ್ತು ಸಚಿವಾಲಯ ಸಿಬ್ಬಂದಿಯ ಮಾಹಿತಿ ಕದ್ದಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News