ಅಧಿಕಾರಕ್ಕೆ ಬರಲು ನಿಮಗೆ ಅಷ್ಟೊಂದು ತುರ್ತು ಯಾಕೆ?: ಕಾಂಗ್ರೆಸ್ ಗೆ ಮೋದಿ ಪ್ರಶ್ನೆ

Update: 2018-07-20 16:58 GMT

ಹೊಸದಿಲ್ಲಿ, ಜು.20: ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಚರ್ಚೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅವಿಶ್ವಾಸ ನಿರ್ಣಯ ಪ್ರಸ್ತಾಪವನ್ನು ತಿರಸ್ಕರಿಸುವಂತೆ ಎಲ್ಲಾ ವಿಪಕ್ಷಗಳಲ್ಲಿ ಕೇಳಿಕೊಂಡರು.

ನಂತರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಅಧಿಕಾರಕ್ಕೆ ಬರಲು ನಿಮಗೆ ಅಷ್ಟೊಂದು ತುರ್ತು ಯಾಕೆ? ಎಂದು ಪ್ರಶ್ನಿಸಿದರು. ದೇಶದ ಅಭಿವೃದ್ಧಿಯನ್ನು ಕೆಲವು ಜನರು ಹೇಗೆ ವಿರೋಧಿಸುತ್ತಿದ್ದಾರೆ ಎಂದು ಇಂದು ದೇಶದ ಜನತೆ ನೋಡುತ್ತಿದ್ದಾರೆ. ನಾವು ಈ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಎನ್ನುವ ಧ್ಯೇಯದಡಿ ಈ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದೇವೆ ಎಂದವರು ಹೇಳಿದರು,

ಕಾಂಗ್ರೆಸ್ ಗೆ ಚುನಾವಣಾ ಆಯೋಗ, ನ್ಯಾಯಾಂಗ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗಳ ಮೇಲೆ ನಂಬಿಕೆಯಿಲ್ಲ. ಅವರಿಗೆ ಯಾವುದರಲ್ಲೂ ನಂಬಿಕೆಯಿಲ್ಲ. ನೀವು ಸರ್ಜಿಕಲ್ ಸ್ಟ್ರೈಕನ್ನು ಜುಮ್ಲಾ ಸ್ಟ್ರೈಕ್ ಎಂದು ಕರೆದಿದ್ದೀರಿ. ನೀವು ನನ್ನನ್ನು ಎಷ್ಟೇ ನಿಂದಿಸಬಹುದು. ಆದರೆ ಸೇನೆಯನ್ನು ಅವಮಾನಿಸಿದರೆ ನಾನು ಸುಮ್ಮನಿರುವುದಿಲ್ಲ ಎಂದು ಮೋದಿ ಹೇಳಿದರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News