ಯೆನೆಪೊಯದಲ್ಲಿ ರೋಬೋಟಿಕ್- 3ಡಿ ಲ್ಯಾಪ್ರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ಕಾರ್ಯಾಗಾರ ಉದ್ಘಾಟನೆ

Update: 2018-07-21 08:47 GMT

ಮಂಗಳೂರು, ಜು.21: ಕ್ಯಾನ್ಸರ್ ರೋಗ ಪತ್ತೆಗೆ ವಿಶೇಷ ತಪಾಸಣಾ ಶಿಬಿರ ನಡೆಸಲು ಸರಕಾರದಿಂದ ನೆರವು ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಝಮೀರ್ ಅಹ್ಮದ್ ತಿಳಿಸಿದ್ದಾರೆ.

ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜಿನಲ್ಲಿ ಸ್ತ್ರೀ ರೋಗ ವಿಭಾಗ, ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವಿಭಾಗ ಹಾಗೂ ಮೂತ್ರ ಶಸ್ತ್ರ ವಿಭಾಗಗಳ ಆಶ್ರಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ರೋಬೋಟಿಕ್- 3ಡಿ ಲ್ಯಾಪ್ರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ಕಾರ್ಯಾಗಾರವನ್ನು ಇಂದು ಕಾಲೇಜಿನ ಸಭಾಂಗಣದಲ್ಲಿ ಉದಾಟಿಸಿ ಅವರು ಮಾತನಾಡುತ್ತಿದ್ದರು.

ಯೆನೆಪೊಯ ಆಸ್ಪತ್ರೆಯಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಮತ್ತು ಸೇವಾ ಮನೋಭಾವದೊಂದಿಗೆ ನೀಡುತ್ತಿರುವ ಚಿಕಿತ್ಸೆ ದೇಶಕ್ಕೆ ಮಾದರಿಯಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಯೆನೆಪೊಯ ಡೀಮ್ಡ್ ಟು ಬಿ ಯುನಿವರ್ಸಿಟಿಯ ವೈ.ಅಬ್ದುಲ್ಲಾ ಕುಂಞಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಯೆನೆಪೊಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಯೆನೆಪೊಯ ಮುಹಮ್ಮದ್ ಕುಂಞಿ, ಉಪಕುಲಪತಿ ಡಾ.ಎಂ.ವಿಜಯಕುಮಾರ್, ಬೆಂಗಳೂರು ಮೆಡಿಕಲ್ ಕಾಲೇಜಿನ ಪ್ರೊ. ಡಾ.ಗೋಪಿನಾಥ್, ಡಾ.ಅಶೋಕ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಇಂದು ಕ್ಯಾನ್ಸರ್ ಶಸಚಿಕಿತ್ಸಾ ವಿಭಾಗದವರಿಂದ ಅನ್ನನಾಳದ ಕ್ಯಾನ್ಸರ್, ಗುದನಾಳದ ಕ್ಯಾನ್ಸರ್, ದೊಡ್ಡ ಕರುಳಿನ ಕ್ಯಾನ್ಸರ್ ಮತ್ತು ಜು.22ರಂದು ಮೂತ್ರ ಶಸ ವಿಭಾಗದವರಿಂದ ಕಿಡ್ನಿ ಕ್ಯಾನ್ಸರ್, ಮೂತ್ರಾಶಯ ಮತ್ತು ಪ್ರೋಸ್ಟೇಟ್ ಕ್ಯಾನ್ಸರ್ ಹಾಗೂ ಸೀ ರೋಗ ವಿಭಾಗದಿಂದ ಅಂಡಾಶಯ, ಗರ್ಭಕೋಶ ಮತ್ತು ಗರ್ಭಕೋಶ ಭಿತ್ತಿ ಪದರದ ಕ್ಯಾನ್ಸರ್‌ಗಳ ಬಗ್ಗೆ ನೈಜ ಪ್ರಾತ್ಯಕ್ಷಿಕೆಗಳು ನಡೆಯಲಿದೆ. ಇದರ ಹೊರತಾಗಿ ಕೊಯಂಬತ್ತೂರು ಜೆಮ್ ಆಸ್ಪತ್ರೆಯ ಡಾ.ಪಲನಿವೇಲು ಅವರಿಂದ ನೈಜ ಪ್ರಾತ್ಯಕ್ಷಿಕೆ ಅಧಿವೇಶನ ಕೂಡ ನಡೆಯಲಿದೆ.

ಡಾ.ಮುಜೀಬುರಹ್ಮಾನ್ ಸ್ವಾಗತಿಸಿದರು. ಡಾ.ಜಲಾಲುದ್ದೀನ್ ಅಕ್ಬರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News