ಅಂತರಂಗದ ವ್ಯಕ್ತಿತ್ವವನ್ನು ಉತ್ತಮಪಡಿಸಿ, ಸಮಾಜಕ್ಕೆ ಹಿತ ಸಂದೇಶವನ್ನು ನೀಡಬೇಕು:ಡಾ.ಜಿ.ಭೀಮೇಶ್ವರ ಜೋಷಿ

Update: 2018-07-21 18:34 GMT

ಮೂಡುಬಿದಿರೆ,ಜು.21 : ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯ ವೈಚಾರಿಕತೆಯನ್ನು ಬರವಣಿಗೆಯ ಜನರಿಗೆ ತಲುಪಿಸುವಂತಹ ಕೆಲಸ ಪತ್ರಿಕೋದ್ಯಮ ಮಾಡುತ್ತಿದೆ, ವೃತ್ತಿಪರ ಕೆಲಸದ ಜೊತೆಗೆ ವೈಚಾರಿಕತೆಯನ್ನು ವಿಭಿನ್ನ ನೆಲೆಯಲ್ಲಿ ಕಂಡುಕೊಳ್ಳುವಂತಹ ಕಾರ್ಯ ಇಂದು ಸಮಾಜಕ್ಕೆ ಬೇಕಾಗಿದೆ ಎಂದು ಶ್ರೀ ಆದಿ ಶಕ್ತ್ಯತ್ಮಕ ಅನ್ನಪೂರ್ಣೆಶ್ವರೀ ದೇವಸ್ಥಾನ ಹೊರನಾಡು ಇದರ ಧರ್ಮಕರ್ತರಾದ ಡಾ. ಜಿ. ಭೀಮೇಶ್ವರ ಜೋಷಿ ಹೇಳಿದರು.

ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆದ ಕೆ. ಎನ್. ಭಟ್ ಶಿರಾಡಿಪಾಲ್ ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಸಮಾಜಮುಖಿ ಕಾರ್ಯಗಳು ಅಗತ್ಯ ಇಂತಹ ಕಾರ್ಯಗಳನ್ನು ಆಯೋಜಿಸುವುದರಿಂದ ಸುಸಂಸ್ಕೃತವಾಗಿ ಬೆಳೆಯಲು ಸಾಧ್ಯ. ಈ ಸುಸಂಧರ್ಭದಲ್ಲಿ ಕೆ. ಎನ್. ಭಟ್ ಶಿರಾಡಿಪಾಲ್ ಅವರ ನೆನಪು ಅಮೋಘ. ಉಸಿರನ್ನು ಹಿಡಿದುಕೊಂಡು ಜನಿಸಿದ ಅವರು ಸಾಯುವ ತನಕ ತನ್ನ ಹೆಸರು ಶಾಶ್ವತವಾಗಿ ಉಳಿಸಿ, ಎಲ್ಲಾ ರೀತಿಯ ಸಾಧನೆ ಮಾಡಿ ಮಾದರಿಯಾಗಿದ್ದಾರೆ. ಶ್ರೀ ಸಾಮಾನ್ಯವಾಗಿ ಜನಿಸಿದ ಅವರು "ತೃಣನಯ" ಎಂಬ ಕಾವ್ಯನಾಮದಿಂದ ತಮ್ಮನ್ನು ತಾವು ಶಿಕ್ಷಣ ರಂಗದಲ್ಲಿ, ಲೇಖಕನಾಗಿ, ಕವಿಯಾಗಿ, ಛಾಯಾಗ್ರಾಹಕನಾಗಿ, ರಂಗ ಕಲಾವಿದನಾಗಿ, ಅಂಕಣಗಾರನಾಗಿ, ಹರಿದಾಸ, ಪಾಕತಜ್ಞ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಧನೆ ಮಾಡಿ ಸೇವೆ ಸಲ್ಲಿಸಿದ್ದಾರೆ ಎಂದರು. 

ಸನ್ಮಾನ : ಧನಲಕ್ಷ್ಮಿ ಕ್ಯಾಶ್ಯೂ ಎಕ್ಸ್ ಪೋಟ್ಸ್ ಮಾಲಕರಾದ ಕೆ.ಶ್ರೀಪತಿ ಭಟ್, ಗಿಲಿಗಿಲಿ ಮ್ಯಾಜಿಕ್ ಖ್ಯಾತಿಯ ಪ್ರೋ ಶಂಕರ್, ನಿವೃತ್ತ ಶಿಕ್ಷಕಿ ಮತ್ತು ಸಾಹಿತಿ, ಗಾಯತ್ರಿ ಉಡುಪ, ನಿವೃತ್ತ ಹಿಂದಿ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಯರು ಆ್ಯಂಡ್ರ್ಯೂ ಡಿ.ಸೋಜಾ ಪಾಲಡ್ಕ,  ಹರಿದಾಸ ಚಂದ್ರಕಾಂತ ಭಟ್, ಪಾಕತಜ್ಞ . ಪ್ರಶಾಂತ್ ಜೈನ್, ಮಾನಸ ಸ್ಟುಡಿಯೋ ಛಾಯಾಗ್ರಾಹಕ ರವಿ ಕೋಟ್ಯಾನ್ ಇವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು. 
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು, ಡಾ.ಎಂ. ಮೋಹನ್ ಆಳ್ವ ಅಧ್ಯಕ್ಷತೆಯನ್ನು ವಹಿಸಿದ್ದರು.  

ಸಂತ ತೆರೆಸಾ ಶಾಲೆಯ ನಿವೃತ್ತ ಶಿಕ್ಷಕಿ, ಮೇರಿ ಮೋರಿಸ್ ಶೆಣೈ  ಸಂಸ್ಮರಣೆ ನುಡಿಗಳನ್ನಾಡಿ ಅವರೊಂದಿಗಿನ ಒಡನಾಟ, ಅನುಭವವನ್ನು ಹಂಚಿಕೊಂಡರು. ತುಂಬಾ ಸೌಮ್ಯ ಸ್ವಭಾವದ ವ್ಯಕ್ತಿತ್ವ ಅವರದು, ಶಾಲೆಯಲ್ಲಿ ಪ್ರಾರ್ಥನೆ ಗೀತೆ, ಹೀಗೆ ಹಲವಾರು ರೀತಿಯ ಕವಿತೆ, ಗೀತೆಯನ್ನು ತಕ್ಚಣ ರಚಿಸುತ್ತಿದ್ದರು. ಹೀಗೆ ಹಲವಾರು ಉದಾಹರಣೆಗಳನ್ನು ತಿಳಿಸಿದರು.

ಮಾಜಿ ಶಾಸಕ ಅಭಯಚಂದ್ರ ಜೈನ್, ಕೆ. ಎನ್. ಭಟ್ ಶಿರಾಡಿಪಾಲ್ ಅವರ ಧರ್ಮಪತ್ನಿ  ವನಜಾ ಶಿರಾಡಿಪಾಲ್, ಯುಗಪುರುಷದ ಭುವನಾಭಿರಾಮ ಉಡುಪ, ಶಿರಾಡಿಪಾಲ್ ಅವರ ಪುತ್ರಿ ಅನುಪಮಾ ಚಿಪ್ಳೂಣ್‍ಕರ್, ಸಂಘಟಕರಾದ ಪತ್ರಕರ್ತ ಹರೀಶ ಆದೂರು, ಮಂದಾರ ರಾಜೇಶ್ ಭಟ್  ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘಟಕ ಕೃಷ್ಣ ಕುಮಾರ್ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಆಳ್ವಾಸ್  ಕಾಲೇಜಿನ  ಉಪನ್ಯಾಸಕಿ  ಶ್ರೀ ಗೌರಿ ಜೋಷಿ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News