ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತ: ಐವರಿಗೆ ಗಾಯ

Update: 2018-07-22 11:01 GMT

ಹೊಸದಿಲ್ಲಿ, ಜು.22: ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಐದು ಮಂದಿ ಗಾಯಗೊಂಡಿರುವ ಘಟನೆ ಗಾಝಿಯಾಬಾದ್ ನ ನೋಯ್ಡಾದ 63ನೆ ಸೆಕ್ಟರ್ ನಲ್ಲಿ ಸಂಭವಿಸಿದೆ.

ಕುಸಿದು ಬಿದ್ದ ಕಟ್ಟಡ 5 ಮಹಡಿಯದ್ದಾಗಿದ್ದು, ರಕ್ಷಣಾ ತಂಡ ಸ್ಥಳಕ್ಕಾಗಮಿಸಿದೆ. ಹಲವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News