ಅಡ್ಕತ್ತಬೈಲ್ ನಲ್ಲಿ ಸರಣಿ ಅಪಘಾತ: ಮಗು ಮೃತ್ಯು; ಹತ್ತು ಮಂದಿಗೆ ಗಾಯ

Update: 2018-07-23 03:30 GMT

ಕಾಸರಗೋಡು, ಜು. 23: ನಗರ ಹೊರವಲಯದ ಅಡ್ಕತ್ತಬೈಲ್  ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಸರಣಿ ಅಪಘಾತದಲ್ಲಿ ಓರ್ವ ಮಗು ಮೃತಪಟ್ಟು, ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ರವಿವಾರ ತಡರಾತ್ರಿ ನಡೆದಿದೆ.

ಕಾರು, ಬಸ್ ಮತ್ತು ಬೈಕ್ ನಡುವೆ ಈ ಅಪಘಾತ ನಡೆದಿದೆ.

ಮಂಗಳೂರು ಕಡೆಗೆ ತೆರಳುತಿದ್ದ ಟೂರಿಸ್ಟ್ ಬಸ್, ಬೈಕ್ ಹಾಗೂ ಕುಂಬಳೆ ಕಡೆಗೆ ತೆರಳುತಿದ್ದ ಕಾರಿನ ನಡುವೆ ಅಪಘಾತ ನಡೆದಿದ್ದು, ಬೈಕ್ ನಲ್ಲಿದ್ದ ಐದು ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಮೃತ ಬಾಲಕರನ್ನು ಮಿನ್ ಹಾಜ್  ಎಂದು ಗುರುತಿಸಲಾಗಿದೆ. ಮಿನ್ ಹಾಜ್ ನ ತಂದೆ ಮತ್ತು ಸಹೋದರಿ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಐವರು ಗಾಯಗೊಂಡಿದ್ದು, ಅವರು ಮೇಲ್ಪರಂಬ ನಿವಾಸಿಗಳೆಂದು ತಿಳಿದುಬಂದಿದೆ. 

ಗಾಯಾಳುಗಳನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News