ಉದಯ ಕುಮಾರ್ ಕಸ್ಟಡಿ ಸಾವು ಪ್ರಕರಣ: ಆರು ಪೊಲೀಸರು ದೋಷಿಗಳು

Update: 2018-07-24 17:45 GMT

ತಿರುವನಂತಪುರ, ಜು. 24: ಫೋರ್ಟ್ ಪೊಲೀಸ್ ಠಾಣೆಯಲ್ಲಿ 2005 ಫೆಬ್ರವರಿ 27ರಂದು ಸಂಭವಿಸಿದ 27ರ ಹರೆಯದ ಉದಯ್ ಕುಮಾರ್ ಅವರ ಕಸ್ಟಡಿ ಸಾವಿಗೆ ಸಂಬಂಧಿಸಿ 6 ಮಂದಿ ಪೊಲೀಸರು ದೋಷಿಗಳು ಎಂದು ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ಹೇಳಿದೆ.

 ಉದಯ ಕುಮಾರ್ ಹಾಗೂ ಅವರ ಗೆಳೆಯ ಸುರೇಶ್ ಕುಮಾರ್ ಅವರನ್ನು ನಗರದಲ್ಲಿರುವ ಉದ್ಯಾನವನದಿಂದ ಪೊಲೀಸ್ ಠಾಣೆಗೆ ಕೊಂಡೊಯ್ದ ಕೆ. ಜಿತುಕುಮಾರ್ ಹಾಗೂ ಎಸ್.ವಿ. ಶ್ರೀಕುಮಾರ್ ಹತ್ಯೆ ದೋಷಿಗಳು, ಟಿ. ಅಜಿತ್ ಕುಮಾರ್ (ಆಗಿನ ಎಸ್‌ಐ) ಇ.ಕೆ. ಸಾಬು (ಆಗಿನ ಸಿಐ) ಹಾಗೂ ಟಿ.ಕೆ. ಹರಿದಾಸ್ (ಆಗಿನ ಉಪ ಆಯುಕ್ತ) ಸಾಕ್ಷಿಗಳನ್ನು ತಿರುಚಿದ, ಸಂಚು ರೂಪಿಸಿದ ದೋಷಿಗಳು ಎಂದು ಪರಿಗಣಿಸಲಾಗಿದೆ.

 ಹತ್ಯೆಯ ಸಂದರ್ಭ ಹೆಚ್ಚುವರಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಮೂರನೆ ಆರೋಪಿ ಸೋಮನ್ ವಿಚಾರಣೆ ವೇಳೆ ಮೃತಪಟ್ಟಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜೆ. ನಸೀರ್ ಬುಧವಾರ ಘೋಷಿಸಲಿದ್ದಾರೆ. ಮೊದಲ ಇಬ್ಬರನ್ನು ರಿಮಾಂಡ್‌ಗೆ ಕಳುಹಿಸಲಾಗಿದೆ. ಉಳಿದವರಿಗೆ ಬುಧವಾರ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಲಾಗಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News