×
Ad

ಗೋವಾ: 10ನೇ ತರಗತಿ ಪಠ್ಯ ಪುಸ್ತಕದಲ್ಲಿ ನೆಹರೂ ಬದಲು ಸಾವರ್ಕರ್ ಭಾವಚಿತ್ರ !

Update: 2018-07-25 23:05 IST

ಪಣಜಿ, ಜು. 24: ಹತ್ತನೇ ತರಗತಿ ಪಠ್ಯ ಪುಸ್ತಕದಲ್ಲಿ ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ಭಾವಚಿತ್ರವನ್ನು ಕೈಬಿಟ್ಟು, ಅದರ ಬದಲಿಗೆ ಆರ್‌ಎಸ್‌ಎಸ್ ಸ್ಥಾಪಕ ವಿನಾಯಕ ಸಾವರ್ಕರ್ ಅವರ ಭಾವಚಿತ್ರ ಸೇರಿಸಿರುವುದನ್ನು ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ಎನ್‌ಎಸ್‌ಯುಐ ಗುರುತಿಸಿದ ಬಳಿಕ ಗೋವಾದಲ್ಲಿ ವಿವಾದ ಭುಗಿಲೆದ್ದಿದೆ.

ಗೋವಾ ಶಿಕ್ಷಣ ಮಂಡಳಿಯ ಪಠ್ಯ ಪುಸ್ತಕದಿಂದ ಜವಾಹರ್ ಲಾಲ್ ನೆಹರೂ ಅವರು ಭಾವಚಿತ್ರ ತೆಗೆದಿರುವುದು ಹಾಗೂ ಅದರ ಬದಲಿಗೆ ಸಾವರ್ಕರ್ ಅವರ ಭಾವಚಿತ್ರ ಸೇರಿಸಿರುವುದು ವಿಷಾದದ ವಿಚಾರ ಎಂದು ಎನ್‌ಎಸ್‌ಯುಐನ ಗೋವಾ ಮುಖ್ಯಸ್ಥ ಅಹ್ರಾಝ್ ಮುಲ್ಲಾ ತಿಳಿಸಿದ್ದಾರೆ. ಇದು ಚರಿತ್ರೆ ಬದಲಾಯಿಸುವ ಹಾಗೂ ಸ್ವಾತಂತ್ರ ಹೋರಾಟಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆಯನ್ನು ಮರೆ ಮಾಚುವ ಬಿಜೆಪಿಯ ತಂತ್ರ ಎಂದು ಅವರು ಹೇಳಿದ್ದಾರೆ. ನಾಳೆ ಅವರು ಮಹಾತ್ಮಾ ಗಾಂಧಿ ಅವರ ಭಾವಚಿತ್ರ ತೆಗೆಯುತ್ತಾರೆ. ಅನಂತರ 60 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ. ಈ ಪುಸ್ತಕದ ಶೀರ್ಷಿಕೆ, ‘ಇಂಡಿಯಾ ಆ್ಯಂಡ್ ದಿ ಕಾಂಟೆಂಪರರಿ ವರ್ಲ್ಡ್ 2-ಡೆಮಾಕ್ರೆಟಿಕ್ ಪೊಲಿಟಿಕ್ಸ್’. ಇದು ಚರಿತ್ರೆ ಹಾಗೂ ರಾಜಕೀಯ ಶಾಸ್ತ್ರದ ಪುಸ್ತಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News