×
Ad

ಹೊಸ ಪೊಲೀಸ್ ಅಧಿಕಾರಿಗೆ ಅಭಿನಂದನೆ ಸಲ್ಲಿಸಲು ಹೋಗಿ ಬಂಧನಕ್ಕೊಳಗಾದ ಗ್ರಾಮದ ಮುಖ್ಯಸ್ಥ

Update: 2018-07-26 17:06 IST

ಮುಝಫ್ಫರನಗರ,ಜು.26 : ಗ್ರಾಮದ ಮುಖ್ಯಸ್ಥನೊಬ್ಬ ಹೊಸದಾಗಿ ನೇಮಕಗೊಂಡ ಪೊಲೀಸ್ ಅಧಿಕಾರಿಯೊಬ್ಬರಿಗೆ  ಅಭಿನಂದನೆ ಸಲ್ಲಿಸಿದ್ದೇ ಆತನಿಗೆ ಭಾರೀ ದುಬಾರಿಯಾಗಿ ಪರಿಣಮಿಸಿದ ಘಟನೆ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. ಆ ಗ್ರಾಮ ಮುಖಂಡನನ್ನು ಆ ಕೂಡಲೇ ಅತ್ಯಾಚಾರ ಯತ್ನ ಪ್ರಕರಣವೊಂದರಲ್ಲಿ ಬಂಧಿಸಲಾಗಿದೆ.

ಪರ್ತಪ್ಪುರ್ ಗ್ರಾಮದ ಮುಖ್ಯಸ್ಥ ಇತ್ವಾರಿ ಸಿಂಗ್ ಎಂಬಾತ ಎರಡು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದ. ಬುಧವಾರ ಆತ ಹೊಸದಾಗಿ ನೇಮಕಗೊಂಡ ಪೊಲೀಸ್ ಅಧಿಕಾರಿ ರಾಜಕುಮಾರ್ ಶರ್ಮ ಎಂಬವರನ್ನು ಭೇಟಿಯಾಗಲು ತೆರಳಿದ್ದ. ಆಗ ಅಲ್ಲಿನ ಇತರ ಸಿಬ್ಬಂದಿಗಳು ಶರ್ಮ ಬಳಿ ಸಿಂಗ್ ಎರಡು ಪ್ರಕರಣಗಳಲ್ಲಿ ಬೇಕಾದವನೆಂದು ಹೇಳಿದ್ದೇ ತಡ ಆತನನ್ನು ಕೂಡಲೇ ಬಂಧಿಸುವಂತೆ ಶರ್ಮ ಆದೇಶಿಸಿದ್ದರು.

ಅತ್ಯಾಚಾರ ಯತ್ನ ಪ್ರಕರಣ ಹೊರತು ಪಡಿಸಿ ಪೊಲೀಸ್ ತಂಡವೊಂದಕ್ಕೆ ಹಲ್ಲೆ ನಡೆಸಿದ ಆರೋಪವೂ ಆತನ ಮೇಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News