19ನೇ ಕಾರ್ಗಿಲ್ ವಿಜಯ್ ದಿವಸ್ : ಹುತಾತ್ಮ ಯೋಧರಿಗೆ ಗೌರವ ವಂದನೆ

Update: 2018-07-26 14:39 GMT

ಹೊಸದಿಲ್ಲಿ, ಜು. 26: ಕಾರ್ಗಿಲ್‌ನ 19ನೇ ವರ್ಷಾಚರಣೆಯಾದ ಗುರುವಾರ ಇಲ್ಲಿನ ಅಮರ್ ಜವಾನ್ ಜ್ಯೋತಿಯಲ್ಲಿ ಗುರುವಾರ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್, ಮೂವರು ಸೇನಾ ಮುಖ್ಯಸ್ಥರಾದ ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್, ನೌಕಾ ಪಡೆಯ ಮುಖ್ಯ ಅಡ್ಮಿರಲ್ ಸುನೀಲ್ ಲಾಂಬಾ ಹಾಗೂ ಏರ್ ಚೀಫ್ ಮಾರ್ಷಲ್ ಬಿರೇಂದ್ರ ಸಿಂಗ್ ಧೋನಾವೊ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ‘‘ನಮ್ಮ ದೇಶದವನ್ನು ರಕ್ಷಿಸಿದ ಹುತಾತ್ಮ ವೀರ ಯೋಧರಿಗೆ ಸೆಲ್ಯೂಟ್ ಸಲ್ಲಿಸುತ್ತೇವೆ’’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕಾರ್ಗಿಲ್ ಬೆಟ್ಟದಲ್ಲಿ ಭಾರತೀಯ ಸೇನಾ ಪಡೆ ಜಯ ಗಳಿಸಿದ ಹಾಗೂ 1999ರಲ್ಲಿ ನಡೆದ ಭಾರತದ ಆಪರೇಶನ್ ವಿಜಯ ಯಶಸ್ವಿಯಾದ ದಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೂರು ದಿನಗಳ ಆಚರಣೆ ಜಮ್ಮು ಹಾಗೂ ಕಾಶ್ಮೀರದ ಕಾರ್ಗಿಲ್ ಪಟ್ಟಣದಲ್ಲಿರುವವ ದ್ರಾಸ್ ಯುದ್ದ ಸ್ಮಾರಕದಲ್ಲಿ ಮಂಗಳವಾರ ಆರಂಭವಾಯಿತು. ಮೊದಲ ದಿನ ಸ್ಮಾರಕಕ್ಕೆ ಹೂಗುಚ್ಛವನ್ನು ಅರ್ಪಿಸುವ ಊಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು. ಬುಧವಾರ ನಡೆದ ಕಾರ್ಯಕ್ರಮದಲ್ಲಿ ಯುದ್ಧದಲ್ಲಿ ಪಾಲ್ಗೊಂಡ ಯೋಧರು ತಮ್ಮ ಅನುಭವಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News