ಮರಣಶಯ್ಯೆಯಲ್ಲಿದ್ದ ಹುಮಾಯುನ್ ತಂದೆ ಬಾಬರ್ ಗೆ ಗೋವುಗಳಿಗೆ ಗೌರವ ನೀಡುವಂತೆ ತಿಳಿಸಿದ್ದ: ರಾಜಸ್ಥಾನದ ಬಿಜೆಪಿ ವರಿಷ್ಠ

Update: 2018-07-26 15:27 GMT

 ಜೈಪುರ, ಜು. 26: ಭಾರತದಲ್ಲಿ ಆಡಳಿತ ಮುಂದುವರಿಸಲು ಗೋವುಗಳಿಗೆ, ಬ್ರಾಹ್ಮಣರಿಗೆ ಹಾಗೂ ಮಹಿಳೆಯರಿಗೆ ಗೌರವ ನೀಡುವಂತೆ ಮರಣಶಯ್ಯೆಯಲ್ಲಿದ್ದ ಮೊಗಲ್ ಸಾಮ್ರಾಟ್ ಹುಮಾಯುನ್ ತನ್ನ ತಂದೆ ಬಾಬರ್‌ಗೆ ತಿಳಿಸಿದ್ದ ಎಂದು ರಾಜಸ್ಥಾನದ ಬಿಜೆಪಿ ಅಧ್ಯಕ್ಷ ಮದನ್ ಲಾಲ್ ಸೈನಿ ತಿಳಿಸಿದ್ದಾರೆ. ‘‘ ಮರಣಶಯ್ಯೆಯಲ್ಲಿದ್ದ ಹುಮಾಯುನ್ ಬಾಬರ್‌ನನ್ನು ಕರೆದು, ನೀನು ಹಿಂದೂಸ್ತಾನದ ಆಡಳಿತ ನಡೆಸಬೇಕಾದರೆ, ಗೋವುಗಳು, ಬ್ರಾಹ್ಮಣರು ಹಾಗೂ ಮಹಿಳೆಯರಿಗೆ ಗೌರವ ನೀಡಬೇಕೆಂಬ ಮೂರು ಅಂಶಗಳನ್ನು ಗಮನದಲ್ಲಿ ಇರಿಸಿಕೊ’’ ಎಂದು ಜೈಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಹುಮಾಯುನ್‌ನ ತಂದೆ ಬಾಬರ್ 1531ರಲ್ಲಿ ಮೃತಪಟ್ಟ. ಅಂದರೆ ಹುಮಾಯುನ್ 1556ರಲ್ಲಿ ತನ್ನ ಕೊನೆಯುಸಿರೆಳೆಯುವುದಕ್ಕಿಂತ 25 ವರ್ಷ ಮೊದಲು ಬಾಬರ್ ಮೃತಪಟ್ಟಿದ್ದ. ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ ಗೋವು ಅಕ್ರಮ ಸಾಗಾಟಗಾರರು ಎಂಬ ಶಂಕೆಯಲ್ಲಿ ವ್ಯಕ್ತಿಯೋರ್ವನನ್ನು ಥಳಿಸಿ ಹತ್ಯೆಗೈದ ಘಟನೆಗಳ ಹಿನ್ನೆಲೆಯಲ್ಲಿ ಸೈನಿ ಅವರು ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News