ತಾಜ್‌ಮಹಲ್ ಉಸ್ತುವಾರಿ ಯಾರು: ಸುಪ್ರೀಂ ಪ್ರಶ್ನೆ

Update: 2018-07-26 14:43 GMT

ಹೊಸದಿಲ್ಲಿ, ಜು. 26: ಆಗ್ರಾದ ಸುತ್ತಮುತ್ತ ಇರುವ ಸಾವಿರಾರು ಮಾಲಿನ್ಯಕಾರಕ ಕೈಗಾರಿಕೆಗಳು ಗಾಳಿ ಹಾಗೂ ನೀರಿಗೆ ವಿಷವನ್ನು ಹೊರ ಸೂಸುತ್ತಿದೆ. ಇದರಿಂದ ತಾಜ್‌ಮಹಲ್ ಹಳದಿ ಬಣ್ಣಕ್ಕೆ ತಿರುಗಿದೆ. ಈ ಬಗ್ಗೆ ಗುರುವಾರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಈ ಪರಿಸ್ಥಿತಿಗೆ ಯಾರು ಜವಾಬ್ದಾರರು ಹಾಗೂ ತಾಜ್ ಮಹಲ್ ಅನ್ನು ಸಂರಕ್ಷಣೆ ಮಾಡುವವರು ಯಾರು ಎಂದು ಪ್ರಶ್ನಿಸಿದೆ. ನಿಖರವಾಗಿ 1167 ಕೈಗಾರಿಕೆಗಳು ಮಾಲಿನ್ಯಕಾರಕ ಎಂದು ಅಫಿದಾವಿತ್ ಸಲ್ಲಿಸಿದ ಬಳಿಕ ನ್ಯಾಯಮೂರ್ತಿ ಮದನ್ ಬಿ. ಲೋಕುರು ಅವರನ್ನು ಒಳಗೊಂಡ ಪೀಠ, ಉತ್ತರಪ್ರದೇಶದಲ್ಲಿ ತಾಜ್‌ಮಹಲ್‌ಗೆ ಜವಾಬ್ದಾರಿ ಯಾರು ? ಅವರು ಏನನ್ನೂ ಮಾಡುತ್ತಿಲ್ಲ. ಉತ್ತರಪ್ರದೇಶ ಸರಕಾರ ಸಮರ್ಪಕವಾಗಿ ಕಾರ್ಯಪ್ರವೃತ್ತವಾದರೆ ಈ ಸಮಸ್ಯೆ ಉದ್ಬವಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News