ಡೋಕಾ ಲಾದಲ್ಲಿ ಮುಂದುವರಿದ ಚೀನಾ ಹಸ್ತಕ್ಷೇಪ; ಭಾರತದಿಂದ ಯಾವುದೇ ಪ್ರತಿಕ್ರಿಯೆಯಿಲ್ಲ: ಯುಎಸ್ ಅಧಿಕಾರಿ

Update: 2018-07-26 17:30 GMT

ವಾಶಿಂಗ್ಟನ್, ಜು.26: ಚೀನಾವು ಸದ್ದಿಲ್ಲದೆ ಡೋಕ ಲಾದಲ್ಲಿ ತನ್ನ ಚಟುವಟಿಕೆಗಳನ್ನು ಮುಂದಿವರಿಸಿದೆ. ಆದರೆ ಭೂತಾನ್ ಆಗಲೀ ಭಾರತವಾಗಲೀ ಇದನ್ನು ತಡೆಯಲು ಮುಂದಾಗಿಲ್ಲ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಡೆಸುತ್ತಿರುವ ಚಟುವಟಿಕೆಗಳನ್ನು ತುಲನೆ ಮಾಡುವ ಸಂದರ್ಭದಲ್ಲಿ ಅಧಿಕಾರಿ ಈ ವಿವರಣೆಯನ್ನು ನೀಡಿದ್ದಾರೆ.

ಚೀನಾ ಇಡೀ ದಕ್ಷೀಣ ಚೀನಾ ಸಮುದ್ರದ ಮೇಲೆ ತನ್ನ ಅಧಿಕಾರವಿದೆ ಎಂದು ಹೇಳಿಕೊಂಡು ಬಂದಿದ್ದರೆ ವಿಯೇಟ್ನಾಂ, ಮಲೇಶ್ಯಾ, ಫಿಲಿಪೈನ್ಸ್, ಬ್ರೂನೈ ಮತ್ತು ತೈವಾನ್ ಇದನ್ನು ವಿರೋಧಿಸಿದೆ. ದಕ್ಷೀಣ ಚೀನಾ ಸಮುದ್ರ ಹಾಗೂ ಪೂರ್ವ ಚೀನಾ ಸಮುದ್ರ ಎರಡರಲ್ಲೂ ಚೀನಾ ಪ್ರಾದೇಶಿಕ ಅಧಿಕಾರದ ವಿವಾದದಲ್ಲಿ ಭಾಗಿಯಾಗಿದೆ. ಈ ಪ್ರದೇಶದಲ್ಲಿ ತನ್ನ ನಿಯಂತ್ರಣದಲ್ಲಿರುವ ಬಹುತೇಕ ದ್ವೀಪಗಳಲ್ಲಿ ಚೀನಾ ಸೇನಾ ನೆಲೆಗಳನ್ನು ನಿರ್ಮಿಸಿದೆ. ಈ ಎರಡೂ ಪ್ರದೇಶಗಳು ಅಗಾಧ ಖನಿಜ, ತೈಲ ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದ್ದು ಜಾಗತಿಕ ವ್ಯಾಪಾರಕ್ಕೂ ಪ್ರಮುಖವಾಗಿದೆ. ಭಾರತವು ತನ್ನ ಉತ್ತರದ ಗಡಿಗಳನ್ನು ರಕ್ಷಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದು ಈ ಬೆಳವಣಿಗೆ ಭಾರತದ ಪಾಲಿಗೆ ಆತಂಕದ ವಿಷಯವಾಗಿದೆ ಎಂದು ದಕ್ಷಿಣ ಮತ್ತು ಕೇಂದ್ರ ಏಶ್ಯಾ ಪ್ರದೇಶಗಳ ಸಹಾಯಕ ಕಾರ್ಯದರ್ಶಿ ಅಲೈಸ್ ಜಿ ವೆಲ್ಸ್ ತಿಳಿಸಿದ್ದಾರೆ. ಹಿಮಾಲಯ ಪ್ರದೇಶದಲ್ಲಿ ಗಡಿವಿವಾದದ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾದ ಮಧ್ಯೆ ಹಲವು ಬಾರಿ ಘರ್ಷಣೆಗಳು ನಡೆದಿದೆ. ಇತ್ತೀಚೆಗೆ ಚೈನೀಸ್ ಲಿಬರೇಶನ್ ಆರ್ಮಿ ಭೂತಾನ್ ಮತ್ತು ಚೀನಾ ಮಧ್ಯೆಯಿರುವ ಡೋಕ ಲಾದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾದ ಕಾರಣ ಭಾರತ ಮತ್ತು ಚೀನಾ ಸೇನೆಗಳ ಮಧ್ಯೆ ಘರ್ಷಣೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News