​ಉಡುಪಿ: ವೈದ್ಯರ ಮುಷ್ಕರಕ್ಕೆ ಸಕರಾತ್ಮಕ ಪ್ರತಿಕ್ರಿಯೆ

Update: 2018-07-28 05:29 GMT

ಉಡುಪಿ, ಜು.28: ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ವಿಧೇಯಕವನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ್ದ ರಾಷ್ಟ್ರವ್ಯಾಪಿ ವೈದ್ಯರ ಮುಷ್ಕರಕ್ಕೆ ಉಡುಪಿಯಲ್ಲಿ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಹುತೇಕ ವೈದ್ಯರು ಹಾಗೂ ಆಸ್ಪತ್ರೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಹೊರರೋಗಿ ವಿಭಾಗ(ಒಪಿಡಿ)ವನ್ನು ಮುಚ್ಚಿದ್ದು, ತುರ್ತು ಚಿಕಿತ್ಸೆ ಸೌಲಭ್ಯವನ್ನು ಮುಂದುವರಿಸಿದೆ. ಆದರೆ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಹೊರರೋಗಿ ವಿಭಾಗ ಎಂದಿನಂತೆ ಕಾರ್ಯಾಚರಿಸುತ್ತಿದೆ ಎಂದು ತಿಳಿದುಬಂದಿದೆ.

ಉಡುಪಿ ಜಿಲ್ಲೆಯ 25 ಆಸ್ಪತ್ರೆಗಳು, 600ರಷ್ಟು ವೈದ್ಯರಿದ್ದಾರೆ. ಮುಷ್ಕರವು ಸಂಜೆ 6 ಗಂಟೆಯ ವರೆಗೆ ನಡೆಯಲಿದೆ. ಬಳಿಕ ಎಂದಿನಂತೆ ಒಪಿಡಿಗಳು ಕಾರ್ಯನಿರ್ವಹಿಸಲಿವೆ ಎಂದು ಸಂಘ(ಐಎಂಎ)ದ ಉಡುಪಿ ಅಧ್ಯಕ್ಷ ಡಾ.ವೈ.ಎಸ್.ರಾವ್ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News