ಮಂಗಳೂರು: ಆಸ್ಪತ್ರೆಗಳಿಗೆ ತಟ್ಟದ ಮುಷ್ಕರದ ಬಿಸಿ

Update: 2018-07-28 06:39 GMT

ಮಂಗಳೂರು, ಜು.28: ಕೇಂದ್ರ ಸರಕಾರ ಜಾರಿ ಮಾಡಲು ಉದ್ದೇಶಿಸಿರುವ ನ್ಯಾಷನಲ್ ಮೆಡಿಕಲ್ ಕಮಿಷನ್ ಕಾಯ್ದೆಯನ್ನು ವಿರೋಧಿಸಿ ಇಂದು ಖಾಸಗಿ ವೈದ್ಯರು ಒಪಿಡಿ ಬಂದ್ ಮಾಡಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಹಾಗಿದ್ದರೂ ಮಂಗಳೂರು ನಗರದ ಪ್ರಮುಖ ಆಸ್ಪತ್ರೆಗಳಾದ ಫಾದರ್ ಮುಲ್ಲರ್, ಕೆಎಂಸಿ ಸೇರಿದಂತೆ ಕೆಲವು ಆಸ್ಪತ್ರೆಗಳಲ್ಲಿ ಒಪಿಡಿಗಳು ತೆರೆದಿದ್ದು, ವೈದ್ಯರು ರೋಗಿಗಳಿಗೆ ಚಿಕಿತ್ಸೆ ಒದಗಿಸುತ್ತಿದ್ದಾರೆ.

ಭಾರತೀಯ ವೈದ್ಯಕೀಯ ಸಂಘ ಒಪಿಡಿ ಬಂದ್‌ಗೆ ಕರೆ ನೀಡಿದ್ದರೂ, ಆಸ್ಪತ್ರೆಗೆ ಬಂದ ರೋಗಿಗಳಿಗೆ ಒಪಿಡಿಯಲ್ಲಿ ಹಾಜರಿರುವ ವೈದ್ಯರು ಎಂದಿನಂತೆ ಬೆಳಗ್ಗಿನಿಂದ ಚಿಕಿತ್ಸೆ ಒದಗಿಸುತ್ತಿದ್ದಾರೆ. ಒಪಿಡಿ ಬಂದ್ ಅಥವಾ ವೈದ್ಯರು ಇಲ್ಲ ಎಂದು ಚಿಕಿತ್ಸೆಗೆ ಆಗಮಿಸಿರುವ ರೋಗಿಗಳನ್ನು ವಾಪಸ್ಕ್ ಕಳುಹಿಸಲಾಗುತ್ತಿಲ್ಲ ಎಂದು ಫಾದರ್ ಮುಲ್ಲರ್ ಆಸ್ಪತ್ರೆ ಹಾಗೂ ಎ.ಜೆ. ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗದ ಶಿಫಾರಸಿನ ಮೇರೆಗೆ ಮಸೂದೆಯನ್ನು ಜಾರಿಗೆ ತರಲು ಉದ್ದೇಶಿಸಿದೆ. ಒಂದು ದಿನದ ಸಾಂಕೇತಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ. ಹಾಗಾಗಿ ತುರ್ತು ಸೇವೆ ಹೊರತು ಪಡಿಸಿ ಹೊರರೋಗಿ ಚಿಕಿತ್ಸೆ ಸೌಲಭ್ಯ ಇರುವುದಿಲ್ಲ ಎಂದು ಖಾಸಗಿ ವೈದ್ಯರ ಸಂಘದ ಅಧ್ಯಕ್ಷರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News