ಮುಂಗಾರುಮಳೆಗೆ 6 ರಾಜ್ಯಗಳಲ್ಲಿ 537 ಮಂದಿ ಬಲಿ
Update: 2018-07-28 21:46 IST
ಹೊಸದಿಲ್ಲಿ, ಜು.28: ಈ ಬಾರಿಯ ಮುಂಗಾರು ಮಳೆಯ ಅಬ್ಬರಕ್ಕೆ 6 ರಾಜ್ಯಗಳಲ್ಲಿ ಇದುವರೆಗೆ 537 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ 139, ಕೇರಳದಲ್ಲಿ 126, ಪಶ್ಚಿಮ ಬಂಗಾಳದಲ್ಲಿ 116, ಉತ್ತರ ಪ್ರದೇಶದಲ್ಲಿ 70,ಗುಜರಾತ್ ನಲ್ಲಿ 52 ಹಾಗು ಅಸ್ಸಾಂನಲ್ಲಿ 34 ಮಂದಿ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ 26 ಜಿಲ್ಲೆಗಳಲ್ಲಿ, ಪಶ್ಚಿಮ ಬಂಗಾಳದಲ್ಲಿ 22, ಅಸ್ಸಾಂನಲ್ಲಿ 21, ಕೇರಳದಲ್ಲಿ 14, ಗುಜರಾತ್ ನಲ್ಲಿ 10 ಜಿಲ್ಲೆಗಳಲ್ಲಿ ರೈಲು ಸಂಚಾರಕ್ಕೆ ಸಮಸ್ಯೆಯಾಗಿದೆ. ಅಸ್ಸಾಂನಲ್ಲಿ 12 ಎನ್ ಡಿಆರ್ ಎಫ್ ತಂಡಗಳು ಪ್ರವಾಹಪೀಡಿತ ಜನರಿಗೆ ನೆರವಾಗುತ್ತಿದೆ. ಒಂದೊಂದು ತಂಡದಲ್ಲಿ 45 ಸಿಬ್ಬಂದಿಯಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 1.61 ಲಕ್ಷ ಮಂದಿ ಮಳೆ ಹಾಗು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.