ಕೇದಿಗೆ ಪ್ರತಿಷ್ಠಾನದಿಂದ ಸಾಧಕರಿಗೆ ಸನ್ಮಾನ

Update: 2018-07-28 17:30 GMT

ಮಂಗಳೂರು, ಜು.28: ಕೇದಿಗೆ ಪ್ರತಿಷ್ಠಾನದಿಂದ ಏಳನೇ ವರ್ಷದ ಭಾಸ್ಕರ್ ಸಂಸ್ಕರಣ ಪ್ರಯುಕ್ತ ನಗರದ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ನಾಲ್ವರು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸೇನೆಯಲ್ಲಿ ಸೇವೆ ಸಲ್ಲಿಸಿದ ಕರ್ನಲ್ ಪ್ರೇಮ್‌ಕುಮಾರ್ ಶೆಟ್ಟಿ ಅವರಿಗೆ ‘ಲಕ್ಷ್ಮೀ ಭಾಸ್ಕರ ರಾಷ್ಟ್ರ ಸೇವಾ ನಿಷ್ಠ’ ಪ್ರಶಸ್ತಿ, ಜಾದೂಗಾರ ಕುದ್ರೋಳಿ ಗಣೇಶ್ ಅವರಿಗೆ ‘ಲಕ್ಷ್ಮೀ ಭಾಸ್ಕರ ವಿಸ್ಮಯ ಕಲಾ ನಿಷ್ಠ’ ಪ್ರಶಸ್ತಿ, ಯಕ್ಷಗಾನ ಭಾಗವತ ಸತ್ಯನಾರಾಯಣ ಪುನಿಚಿತ್ತಾಯ ಅವರಿಗೆ ‘ಲಕ್ಷ್ಮೀ ಭಾಸ್ಕರ ಯಕ್ಷಗಾನ ನಿಷ್ಠ’ ಪ್ರಶಸ್ತಿ, ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿರುವ ಭವನ್ ಪಿ.ಜಿ. ಅವರಿಗೆ ಲಕ್ಷ್ಮೀ ಭಾಸ್ಕರ ಚಿತ್ರಕಲಾ ನಿಷ್ಠ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾರತೀಯ ಸೀನಿಯರ್ ಚೇಂಬರ್‌ನ ಎಂ.ಆರ್. ಜಯೇಶ್, ಗೌರವ ಅತಿಥಿಯಾಗಿ ದ.ಕ. ಜಿಲ್ಲೆಯ ಮಾಜಿ ಯೋಧರ ಸಂಘದ ಅಧ್ಯಕ್ಷ ವಿಕ್ರಮ ದತ್ತ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಬ್ರಿಗೇಡಿಯರ್ ಐಎನ್‌ರೈ, ಅನಂತ ಪದ್ಮನಾಭ, ಗಣೇಶ್ ಸೋಮಯಾಜಿ, ದಿನೇಶ್ ಹೊಳ್ಳ, ಜೇಸಿಐನ ಅನಿಲ್‌ಕುಮಾರ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮೇಘಾ ಭಟ್ ಪ್ರಾರ್ಥಿಸಿದರು. ಕೇದಿಗೆ ಅರವಿಂದ ರಾವ್ ಸ್ವಾಗತಿಸಿದರು. ಅರೆಹೊಳೆ ರಾವ್ ನಿರೂಪಿಸಿದರು. ಗಾಯತ್ರಿ ರಾವ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News