ಏಶ್ಯಾ ರಾಷ್ಟ್ರಗಳಿಗೆ ಪ್ರವಾಸ: ಕೇಂದ್ರ ಸರಕಾರದ ಉದ್ಯೋಗಿಗಳಿಗೆ ಭತ್ತೆ ಸಾಧ್ಯತೆ

Update: 2018-07-29 14:45 GMT

 ಹೊಸದಿಲ್ಲಿ, ಜು. 29: ಕೇಂದ್ರ ಸರಕಾರದ ಉದ್ಯೋಗಿಗಳು ಶೀಘ್ರದಲ್ಲಿ ರಜಾ ಪ್ರವಾಸ ರಿಯಾಯಿತಿ (ಐಟಿಸಿ)ಯಲ್ಲಿ ವಿದೇಶಕ್ಕೆ ಪ್ರಯಾಣಿಸಲು ಸಾಧ್ಯವಾಗಲಿದೆ ಎಂದು ಉನ್ನತ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

 ಗೃಹ, ಪ್ರವಾಸೋದ್ಯಮ, ವೆಚ್ಚ ಹಾಗೂ ನಾಗರಿಕ ವಿಮಾನ ಯಾನದಂತಹ ಇಲಾಖೆಗಳಿಂದ ಪ್ರತಿಕ್ರಿಯೆ ಕೇಳಿರುವ ಸಿಬ್ಬಂದಿ ಸಚಿವಾಲಯ ಪ್ರಸ್ತಾವವನ್ನು ಅಂತಿಮಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ. ಕಝಕ್‌ಸ್ತಾನ್, ಟರ್ಕ್‌ಮೆನಿಸ್ತಾನ್, ಉಝ್ಬೆಕಿಸ್ತಾನ್, ಕಿರ್ಗಿಸ್ತಾನ ಹಾಗೂ ತಜಿಕಿಸ್ತಾನ್ ಮೊದಲಾದ 5 ಏಶ್ಯಾ ರಾಷ್ಟ್ರಗಳನ್ನು ಐಟಿಸಿ ಯೋಜನೆ ಅಡಿಯಲ್ಲಿ ಸೇರಿಬೇಕು ಎಂದು ವಿದೇಶಾಂಗ ಸಚಿವಾಲಯದ ಯೋಜನಾ ಪ್ರಸ್ತಾಪದಲ್ಲಿ ಕೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವ್ಯೂಹಾತ್ಮಕವಾಗಿ ಮುಖ್ಯವಾಗಿರುವ ಏಶ್ಯಾ ವಲಯದಲ್ಲಿ ಭಾರತದ ಹೆಜ್ಜೆ ಗುರುತನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಈ ದೇಶಗಳಿಗೆ ಕೇಂದ್ರ ಸರಕಾರದ ಉದ್ಯೋಗಿಗಳು ಭೇಟಿ ನೀಡಲು ಅವಕಾಶ ನೀಡುವ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News