ಯಮನ್‌ನ ಎಲ್ಲ 25,000 ಹಜ್ ಯಾತ್ರಿಕರ ಸ್ವಾಗತಕ್ಕೆ ಸಜ್ಜು: ಸೌದಿ

Update: 2018-07-30 14:24 GMT

ಜಿದ್ದಾ, ಜು. 30: ಯಮನ್‌ನ ಎಲ್ಲ ರಾಜ್ಯಗಳ ಹಜ್ ಯಾತ್ರಿಕರನ್ನು ಯಾವುದೇ ತಾರತಮ್ಯವಿಲ್ಲದೆ ಸ್ವಾಗತಿಸಲು ಹಾಗೂ ಅವರಿಗೆ ಮಾರ್ಗದರ್ಶನ ನೀಡಲು ಸೌದಿ ಅರೇಬಿಯ ಸರಕಾರವು ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ ಎಂದು ಯಮನ್ ದತ್ತಿ ಮತ್ತು ಮಾರ್ಗದರ್ಶನ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಗಸ್ಟ್ 2ರಿಂದ ವಾಡಿಯಾ ಬಂದರು ಮೂಲಕ ಯಮನ್ ಭೂಭಾಗದಿಂದ ಬರುವ ಸುಮಾರು 25,000 ಯಮನ್ ಯಾತ್ರಿಕರನ್ನು ಸ್ವಾಗತಿಸಲು ಸಿದ್ಧತೆಗಳನ್ನು ಪೂರ್ಣಗೊಳಿಸಿರುವುದಾಗಿ ಸಚಿವಾಲಯ ತಿಳಿಸಿದೆ.

ಯಮನ್ ಯಾತ್ರಿಕರು ಸೌದಿ ಅರೇಬಿಯಕ್ಕೆ ಹೋಗುವ ಏಕೈಕ ಭೂಮಾರ್ಗ ವಾಡಿಯಾ ಬಂದರು ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News