ಸಂತ್ರಸ್ಥೆಗೆ ಅತಿಯಾದ ಮಾದಕ ದ್ರವ್ಯ ನೀಡಲಾಗಿತ್ತು: ಕ್ರೈಮ್ ಬ್ರಾಂಚ್

Update: 2018-07-30 18:19 GMT

ಜಮ್ಮು/ಪಠಾಣ್‌ಕೋಟ್, ಜು. 30: ಅತಿಯಾಗಿ ಮಾದಕ ದ್ರವ್ಯ ನೀಡಿರುವುದರಿಂದ ಲೈಂಗಿಕ ದೌರ್ಜನ್ಯ ಹಾಗೂ ಹತ್ಯೆಯ ಸಂದರ್ಭ ಕಥುವಾದ 8 ವರ್ಷದ ಬಾಲಕಿಗೆ ಪ್ರತಿಭಟಿಸಲು ಸಾಧ್ಯವಾಗಲಿಲ್ಲ ಎಂದು ಜಮ್ಮು ಹಾಗೂ ಕಾಶ್ಮೀರ ಕ್ರೈಮ್ ಬ್ರಾಂಚ್ ಸೋಮವಾರ ಸತ್ರ ಪಠಾಣ್‌ಕೋಟ್ ನ್ಯಾಯಾಲಯಕ್ಕೆ ಸಲ್ಲಿಸಿದ ಪೂರಕ ಆರೋಪ ಪಟ್ಟಿಯಲ್ಲಿ ಹೇಳಿದೆ.

 ಪಠಾಣ್‌ಕೋಟ್‌ನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ತೇಜ್ವಿಂದರ್ ಸಿಂಗ್ ಮುಂದೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಇದು ಜಮ್ಮು ಹಾಗೂ ಕಾಶ್ಮೀರ ಪೊಲೀಸ್ ಕ್ರೈಮ್ ಬ್ರಾಂಚ್ ತಂಡದ ತನಿಖಾ ವಿವರವನ್ನು ಮಾತ್ರ ನೀಡಿಲ್ಲ. ಬದಲಾಗಿ 2018 ಜನವರಿಯಲ್ಲಿ 8 ಮಂದಿ ಆರೋಪಿಗಳನ್ನು ಬಂಧಿಸಲು ನೆರವಾದ ಕರೆ ದಾಖಲೆ ಹಾಗೂ ಬ್ಯಾಂಕ್ ಖಾತೆಯ ವಿಶ್ಲೇಷಣೆಯ ವಿವರವನ್ನು ಕೂಡ ಒಳಗೊಂಡಿದೆ.

 ಹಿರಿಯ ಪೊಲೀಸ್ ಅಧೀಕ್ಷಕ ಆರ್.ಕೆ. ಜಲ್ಲಾ, ವಿಶೇಷ ಸರಕಾರಿ ವಕೀಲ ಜೆ.ಕೆ. ಛೋಪ್ರಾ ಹಾಗೂ ಸಂತೋಷ್ ಸಿಂಗ್ ಬಸ್ರಾ, ಭೂಪಿಂದರ್ ಸಿಂಗ್, ಹರ್ಮಿಂದರ್ ಸಿಂಗ್ ನೇತೃತ್ವದ ಕ್ರೈಮ್ ಬ್ರಾಂಚ್ ತಂಡ ಪೂರಕ ಆರೋಪ ಪಟ್ಟಿಯನ್ನು ಪಠಾಣ್‌ಕೋಟ್ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ತೇಜ್ವಿಂದರ್ ಸಿಂಗ್ ಅವರಿಗೆ ಸಲ್ಲಿಸಿತು.

ಕರೆ ವಿಶ್ಲೇಷಣೆ, ಬ್ಯಾಂಕ್ ವಿವರ ಹಾಗೂ ವೈದ್ಯಕೀಯ ವಿವರಗಳನ್ನು ಒಳಗೊಂಡ ವಿವರಗಳನ್ನು ನೀಡುವ ಪೂರಕ ಆರೋಪ ಪಟ್ಟಿಯನ್ನು ನಾವು ಸಲ್ಲಿಸಿದ್ದೇವೆ ಎಂದು ಸರಕಾರಿ ವಕೀಲ ಛೋಪ್ರಾ ಹೇಳಿದ್ದಾರೆ.

ಕಥುವಾದ ಬಾಲಕಿಗೆ ಗಾಂಜಾ ಸೇರಿದಂತೆ ಹಲವು ಮಾದಕ ಪದಾರ್ಥಗಳನ್ನು ಬಲವಂತವಾಗಿ ನೀಡಲಾಗಿತ್ತು ಎಂಬ ಆಘಾತಕಾರಿ ವಿವರಗಳನ್ನು ಆರೋಪ ಪಟ್ಟಿ ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News