ಅಮೆರಿಕದಿಂದ ಭಾರತದ ಸ್ಥಾನಮಾನ ಏರಿಕೆ: ಆಧುನಿಕ ರಕ್ಷಣಾ ಉತ್ಪನ್ನಗಳ ಶೀಘ್ರ ರಫ್ತಿಗೆ ವೇದಿಕೆ ಸಜ್ಜು

Update: 2018-07-31 16:02 GMT

ವಾಶಿಂಗ್ಟನ್, ಜು. 31: ವ್ಯಾಪಾರಿ ಭಾಗೀದಾರನಾಗಿ ಭಾರತದ ಸ್ಥಾನಮಾನವನ್ನು ಅಮೆರಿಕವು ತನ್ನ ನ್ಯಾಟೊ ಮಿತ್ರ ದೇಶಗಳ ಮಟ್ಟಕ್ಕೆ ಸೋಮವಾರ ಏರಿಸಿದೆ. ಉನ್ನತ ತಂತ್ರಜ್ಞಾನದ ರಕ್ಷಣಾ ಮತ್ತು ರಕ್ಷಣೇತರ ಉತ್ಪನ್ನಗಳ ಮಾರಾಟವನ್ನು ತ್ವರಿತಗೊಳಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಈ ಉತ್ಪನ್ನಗಳ ಮಾರಾಟದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣಗಳನ್ನು ವಿಧಿಸಲಾಗಿದೆ.

‘‘ನಾವು ಭಾರತಕ್ಕೆ ಸ್ಟ್ರಾಟಜಿಕ್ ಟ್ರೇಡ್ ಆಥರೈಸೇಶನ್ ಸ್ಥಾನಮಾನ ಎಸ್‌ಟಿಎ-1ನ್ನು ನೀಡಿದ್ದೇವೆ. ಇದು ನಮ್ಮ ರಫ್ತು ನಿಯಂತ್ರಣ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಸ್ಥಾನಮಾನವಾಗಿದೆ ಹಾಗೂ ಇದು ಅಮೆರಿಕ-ಭಾರತ ಭದ್ರತಾ ಮತ್ತು ಆರ್ಥಿಕ ಬಾಂಧವ್ಯವನ್ನು ಗಣನೆಗೆ ತೆಗೆದುಕೊಳ್ಳುತ್ತದೆ’’ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಇಂಡೋ-ಪೆಸಿಫಿಕ್ ವಾಣಿಜ್ಯ ವೇದಿಕೆಯಲ್ಲಿ ಹೇಳಿದರು.

ಈ ಸ್ಥಾನಮಾನದ ಹಿನ್ನೆಲೆಯಲ್ಲಿ ಭಾರತಕ್ಕೆ ಅಮೆರಿಕದ ಉತ್ಪನ್ನಗಳನ್ನು ರಫ್ತು ಮಾಡಲು ಅಗತ್ಯವಿರುವ ಪರವಾನಿಗೆಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತದೆ ಹಾಗೂ ಆಧುನಿಕ ರಕ್ಷಣಾ ತಂತ್ರಜ್ಞಾನಗಳನ್ನು ಭಾರತ ಸುಲಭವಾಗಿ ಪಡೆಯಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News