ಸೌದಿ: ಬಹಾ ಜೇನುತುಪ್ಪ ಉತ್ಸವಕ್ಕೆ 50,0000 ಮಂದಿ

Update: 2018-07-31 16:22 GMT

ಜಿದ್ದಾ, ಜು. 31: ಸೌದಿ ಅರೇಬಿಯದ ಬಹಾ ವಲಯದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಜೇನುತುಪ್ಪ ಉತ್ಸವಕ್ಕೆ ದೇಶ ವಿದೇಶಗಳಿಂದ 50,000ಕ್ಕೂ ಅಧಿಕ ಮಂದಿ ಆಗಮಿಸಿದ್ದಾರೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ವಿವಿಧ ಮಾದರಿಯ ಜೇನುತುಪ್ಪ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು.

ಈ ಉತ್ಸವವು ಸ್ಥಳೀಯ ಪ್ರವಾಸೋದ್ಯಮಕ್ಕೆ ಭಾರೀ ಪ್ರಮಾಣದಲ್ಲಿ ದೇಣಿಗೆ ನೀಡಿದೆ.

ಪ್ರಮಾಣಿತ ಮಾರಾಟಗಾರರಿಂದ ಜೇನುತುಪ್ಪ ಪಡೆದುಕೊಳ್ಳುವ ಅವಕಾಶವನ್ನು ಉತ್ಸವವು ಜನರಿಗೆ ಒದಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News