ಜಲಾಲಾಬಾದ್ ಸರಕಾರಿ ಕಟ್ಟಡಕ್ಕೆ ಉಗ್ರರ ದಾಳಿ: ಡಝನ್‌ಗಟ್ಟಳೆ ಜನರ ಒತ್ತೆಸೆರೆ
Update: 2018-07-31 22:23 IST
ಜಲಾಲಾಬಾದ್ (ಅಫ್ಘಾನಿಸ್ತಾನ), ಜು. 31: ಅಫ್ಘಾನಿಸ್ತಾನದ ಪೂರ್ವದ ನಗರ ಜಲಾಲಾಬಾದ್‌ನ ಸರಕಾರಿ ಕಟ್ಟಡವೊಂದಕ್ಕೆ ಮಂಗಳವಾರ ನುಗ್ಗಿದ ಭಯೋತ್ಪಾದಕರು ಡಝನ್‌ಗಟ್ಟಳೆ ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ.
ಸರಕಾರಿ ಕಟ್ಟಡದ ದ್ವಾರದಲ್ಲಿ ಆತ್ಮಹತ್ಯಾ ಬಾಂಬರ್ ಒಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡ ಬಳಿಕ, ಬಂದೂಕುಧಾರಿಗಳು ಕಟ್ಟಡಕ್ಕೆ ನುಗ್ಗಿದರು.
ಮೂವರಿದ್ದ ಕಾರೊಂದು ನಿರಾಶ್ರಿತ ವ್ಯವಹಾರಗಳ ಕಟ್ಟಡದ ದ್ವಾರದ ಸಮೀಪಕ್ಕೆ ಧಾವಿಸಿತು. ಅದರಿಂದ ಸುತ್ತ ಗುಂಡು ಹಾರಿಸುತ್ತಾ ಓರ್ವ ಬಂದೂಕುಧಾರಿ ಇಳಿದನು. ಇನ್ನೋರ್ವ ವ್ಯಕ್ತಿ ತನ್ನನ್ನು ತಾನು ಸ್ಫೋಟಿಸಿಕೊಂಡನು.
ಬಳಿಕ ಇಬ್ಬರು ಬಂದೂಕುಧಾರಿಗಳು ಕಟ್ಟಡದ ಒಳಗೆ ನುಗ್ಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ನಿಮಿಷಗಳ ಬಳಿಕ ಕಾರು ಸ್ಫೋಟಗೊಂಡಿತು. ರಸ್ತೆಯಲ್ಲಿದ್ದ ಹಲವಾರು ಮಂದಿ ಗಾಯಗೊಂಡರು.