ಮ್ಯಾನ್ಮಾರ್‌ನಲ್ಲಿ ಭೀಕರ ಪ್ರವಾಹ: 1.2 ಲಕ್ಷ ಮಂದಿ ನಿರ್ವಸಿತ; 11 ಸಾವು

Update: 2018-07-31 16:55 GMT

ಯಾಂಗನ್, ಜು. 31: ಆಗ್ನೇಯ ಮ್ಯಾನ್ಮಾರ್‌ನ ವಿಶಾಲ ಪ್ರದೇಶವನ್ನು ನೆರೆ ನೀರು ಆವರಿಸಿದ್ದು, ಸುಮಾರು 1.20 ಲಕ್ಷ ಮಂದಿ ನಿರ್ವಸಿತರಾಗಿದ್ದಾರೆ ಹಾಗೂ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಭಯಭೀತ ನಿವಾಸಿಗಳು ತಮ್ಮ ಮಕ್ಕಳನ್ನು ಹೆಗಲಲ್ಲಿ ಹೊತ್ತುಕೊಂಡು ಎತ್ತರದ ಪ್ರದೇಶಗಳತ್ತ ಧಾವಿಸುತ್ತಿದ್ದಾರೆ.

ಈವರೆಗೆ 285 ನಿರಾಶ್ರಿತ ಶಿಬಿರಗಳಲ್ಲಿ 1.18 ಲಕ್ಷಕ್ಕೂ ಅಧಿಕ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ.

ಮೃತಪಟ್ಟವರಲ್ಲಿ ಮೂವರು ಸೈನಿಕರೂ ಸೇರಿದ್ದಾರೆ. ಮೃತರ ಸಂಖ್ಯೆ ಇನ್ನೂ ಹೆಚ್ಚಬಹುದು ಎಂಬ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಜಡಿ ಮಳೆ ಮಂಗಳವಾರವೂ ಮುಂದುವರಿದಿದ್ದು, ಪ್ರವಾಹದ ನೀರು ನಾಲ್ಕು ರಾಜ್ಯಗಳ ಹುಲ್ಲು ಛಾವಣಿಯ ಮನೆಗಳನ್ನು ಸುತ್ತುವರಿದಿದೆ ಹಾಗೂ ಕೃಷಿ ಭೂಮಿಗಳನ್ನು ಕೊಚ್ಚಿಕೊಂಡು ಹೋಗಿದೆ.

ನೆರೆಯಲ್ಲಿ ಸಿಕ್ಕಿಕೊಂಡಿರುವ ಜನರನ್ನು ದೋಣಿಗಳು ರಕ್ಷಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News