ಮಹಿಳೆಗೆ ಲೈಂಗಿಕ ಕಿರುಕುಳ: ಕಾಂಗ್ರೆಸ್‌ ಐಟಿ ಸೆಲ್ ಸದಸ್ಯನ ಬಂಧನ

Update: 2018-07-31 18:05 GMT

ಹೊಸದಿಲ್ಲಿ, ಜು. 31: ಮಹಿಳೆಯೋರ್ವರ ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮದ ತಂಡದ ಸದಸ್ಯ ಚಿರಾಗ್ ಪಟ್ನಾಯಕ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಆತನನ್ನು ಅನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು. ಕಾಂಗ್ರೆಸ್ ಐಟಿ ಸೆಲ್‌ನ ಸದಸ್ಯೆಯೋರ್ವರು, ತನಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ ಬಳಿಕ ಪಟ್ನಾಯಕ್ ವಿರುದ್ಧ ಜುಲೈ 3ರಂದು ಪ್ರಕರಣ ದಾಖಲಿಸಲಾಗಿತ್ತು. ಪಟ್ನಾಯಕ್ ವಿರುದ್ಧದ ದೂರನ್ನು ಕೇಳಲು ಕಾಂಗ್ರೆಸ್‌ನ ಸಾಮಾಜಿಕ ಮಾದ್ಯಮದ ಮುಖ್ಯಸ್ಥೆ ದಿವ್ಯ ಸ್ಪಂದನ ನಿರಾಕರಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಆದಾಗ್ಯೂ, ಈ ವಿಷಯದ ಕುರಿತು ಆಂತರಿಕ ಸಮಿತಿ ತನಿಖೆ ನಡೆಸುತ್ತಿದೆ ಎಂದು ಸ್ಪಂದನ ಹೇಳಿದ್ದರು. ಈ ಹಿಂದೆ ಜುಲೈಯಲ್ಲಿ ಪಟ್ನಾಯಕ್ ಅವರನ್ನು ಸಮರ್ಥಿಸಿಕೊಂಡು ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮದ 39 ಸದಸ್ಯರು ಸಹಿ ಹಾಕಿದ್ದ ಹೇಳಿಕೆಯನ್ನು ದಿವ್ಯ ಸ್ಪಂದನ ಬಿಡುಗಡೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News