ಮಂಗಳೂರು –ದುಬೈ ಸ್ಪೈಸ್ ಜೆಟ್ ವಿಮಾನ ರದ್ದು; ಪ್ರಯಾಣಿಕರ ಪರದಾಟ

Update: 2018-08-01 05:25 GMT

ಮಂಗಳೂರು, ಆ.1: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ತಡರಾತ್ರಿ ದುಬೈಗೆ ಹೊರಡಬೇಕಿದ್ದ ಸ್ಪೈಸ್ ಜೆಟ್ ವಿಮಾನವು ಪೈಲಟ್‌ನ ಅನಾರೋಗ್ಯ ಕಾರಣ ಇನ್ನೂ ವಿಮಾನ ನಿಲ್ದಾಣದಲ್ಲಿ ಬಾಕಿಯಾಗಿದೆ. ಇದರಿಂದ 188 ಪ್ರಯಾಣಿಕರು ಸಂಕಷ್ಟಕ್ಕೊಳಗಾಗಿದ್ದಾರೆ. 

ಮಂಗಳೂರು- ದುಬೈ ನಡುವೆ ಸ್ಪೈಸ್‌ಜೆಟ್ ವಿಮಾನವು ನಿನ್ನೆ ತಡರಾತ್ರಿ 12:45ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಾನ ಆರಂಭಿಸಬೇಕಿತ್ತು. ಆದರೆ ಈ ಮಧ್ಯೆ ಪೈಲಟ್‌ಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ವಿಮಾನ ಯಾನವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಯಿತು. ಇದರಿಂದ ಈ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ 188 ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಉಳಿದು ಅತಂತ್ರರಾದರು. ಬಳಿಕ ಈ ಪ್ರಯಾಣಿಕರಿಗೆ ತಂಗಲು ಸ್ಪೈಸ್‌ಜೆಟ್ ಸಂಸ್ಥೆಯು ಹೋಟೆಲ್‌ನಲ್ಲಿ ವ್ಯವಸ್ಥೆ ಕಲ್ಪಿಸಿದೆ.

 ಈ ಮಂಗಳೂರು-ದುಬೈ ಸ್ಪೈಸ್ ಜೆಟ್ ವಿಮಾನವು ಭಾರೀ ತಡವಾಗಿ ಅಂದರೆ ಇಂದು ಸಂಜೆ 5 ಗಂಟೆಗೆ ದುಬೈಗೆ ಪ್ರಯಾಣ ಬೆಳೆಸಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News