ಮುಲ್ಕಿ: ಮಗುವಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

Update: 2018-08-02 07:23 GMT

ಮುಲ್ಕಿ, ಆ.2: ಐದು ವರ್ಷದ ಮಗುವನ್ನು ಬಾವಿಗೆ ತಳ್ಳಿ ತಾಯಿಯೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಲ್ಕಿ ಸಮೀಪದ ಗೇರುಕಟ್ಟೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.

ಇಲ್ಲಿನ ಗೇರುಕಟ್ಟೆ ಜ್ಯೂನಿಯರ್ ಕಾಲೇಜು ಬಳಿಯ ನಿವಾಸಿ ಸುಧಾಕರ ಎಂಬವರ ಪತ್ನಿ ಸುಜಾತಾ(48) ಹಾಗೂ ಮಗಳು ಕೃತಿಕಾ(5) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.

ಬೆಳಗ್ಗೆ 9:30ರವರೆಗೆ ಮನೆಯಲ್ಲಿದ್ದ ಸುಜಾತಾ ಹಾಗೂ ಕೃತಿಕಾ ಬಳಿಕ ಕಾಣೆಯಾಗಿದ್ದರೆನ್ನಲಾಗಿದೆ. ಬಳಿಕ ಹುಡುಕಾಟ ನಡೆಸಿದಾಗ ಅವರಿಬ್ಬರ ಮೃತದೇಹಗಳು ಮನೆಯ ಬಾವಿಯಲ್ಲಿ ತೇಲುತ್ತಿತ್ತೆನ್ನಲಾಗಿದೆ.

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿದ್ದು, ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News