×
Ad

‘ಗಣಿತದ ನೊಬೆಲ್ ಬಹುಮಾನ’ ಪಡೆದ ಬೆನ್ನಲ್ಲೇ ಪದಕದ ಕಳ್ಳತನ

Update: 2018-08-02 19:20 IST

  ರಿಯೋ ಡಿ ಜನೈರೊ (ಬ್ರೆಝಿಲ್), ಆ. 2: ‘ಗಣಿತದ ನೊಬೆಲ್ ಬಹುಮಾನ’ ಎಂದೇ ಕರೆಯಲ್ಪಡುವ ‘ಫೀಲ್ಡ್ಸ್ ಮೆಡಲ್’ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಪ್ರಶಸ್ತಿ ಪದಕವು ಕಳವಾದ ಘಟನೆ ವರದಿಯಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಬ್ರೆಝಿಲ್‌ನ ರಿಯೋ ಡಿ ಜನೈರೋ ನಗರದಲ್ಲಿ ಬುಧವಾರ ನಡೆಯಿತು.

ಇಂಗ್ಲೆಂಡ್‌ನ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಇರಾನ್‌ನ ಕುರ್ದಿಶ್ ನಿರಾಶ್ರಿತ ಕೌಚರ್ ಬಿರ್ಕರ್, ಪ್ರಶಸ್ತಿ ಸ್ವೀಕರಿಸಿದ ಬಳಿಕ, ಪ್ರಶಸ್ತಿಯ ಭಾಗವಾಗಿರುವ ಸುಮಾರು 7.75 ಲಕ್ಷ ರೂಪಾಯಿ ಬೆಲೆಯ ಬಂಗಾರದ ಪದಕವನ್ನು ಬ್ರೀಫ್‌ಕೇಸ್‌ನಲ್ಲಿ ಇಟ್ಟಿದ್ದರು. ಸ್ವಲ್ಪವೇ ಹೊತ್ತಿನಲ್ಲಿ ಪದಕ ಕಳವಾಗಿರುವುದು ಅವರ ಗಮನಕ್ಕೆ ಬಂತು ಎಂದು ಸಂಘಟಕರು ಹೇಳಿದರು.

ಸಮೀಪದ ಪೆವಿಲಿಯನ್‌ನಲ್ಲಿ ಖಾಲಿ ಬ್ರೀಫ್‌ಕೇಸನ್ನು ರಿಯೋಸೆಂಟ್ರೊ ಪೊಲೀಸರು ಪತ್ತೆಹಚ್ಚಿದರು.

ಸಿಸಿಟಿವಿಗಳ ಮೂಲಕ ಪೊಲೀಸರು ಇಬ್ಬರು ಶಂಕಿತರನ್ನು ಗುರುತಿಸಿದ್ದಾರೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News