ಕ್ರೀಡಾಪಟುಗಳಿಗಾಗಿ ನೂತನ ಭಡ್ತಿ ನೀತಿಗೆ ರೈಲ್ವೆ ಸಚಿವರ ಅನುಮತಿ

Update: 2018-08-02 14:41 GMT

ಹೊಸದಿಲ್ಲಿ,ಆ.2: ರೈಲ್ವೆ ಇಲಾಖೆಯಲ್ಲಿನ ಕ್ರೀಡಾಪಟುಗಳಿಗೆ ಭಡ್ತಿ ನೀಡುವ ನೂತನ ನೀತಿಗೆ ರೈಲ್ವೆ ಸಚಿವ ಪಿಯೂಷ ಗೋಯಲ್ ಅವರು ಗುರುವಾರ ಹಸಿರು ನಿಶಾನೆಯನ್ನು ತೋರಿಸಿದ್ದಾರೆ.

ಎರಡು ಬಾರಿ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಪಾಲ್ಗೊಂಡ ಅಥವಾ ಏಷ್ಯನ್ ಅಥವಾ ಕಾಮನ್‌ವೆಲ್ತ್ತ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಿಗೆ,ಅರ್ಜುನ ಅಥವಾ ರಾಜೀವ ಗಾಂಧಿ ಖೇಲ್‌ರತ್ನದಂತಹ ಪ್ರಶಸ್ತಿ ಪುರಸ್ಕೃತರಿಗೆ ಅಧಿಕಾರಿಗಳ ಹುದ್ದೆಗೆ ಭಡ್ತಿ ನೀಡಲಾಗುವುದು ಎಂದು ಇಲಾಖೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಒಲಿಂಪಿಕ್ಸ್‌ನಲ್ಲಿ ಕನಿಷ್ಠ ಒಂದು ಪದಕ ಸೇರಿದಂತೆ ವಿಶ್ವ ಕಪ್ ಅಥವಾ ವಿಶ್ವ ಚಾಂಪಿಯನ್‌ಷಿಪ್ ಅಥವಾ ಏಷ್ಯನ್ ಅಥವಾ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಮತ್ತು ಒಲಿಂಪಿಕ್ಸ್‌ನಲ್ಲಿ ತಮ್ಮಿಂದ ತರಬೇತಿ ಪಡೆದವರು ಕನಿಷ್ಠ ಮೂರು ಪದಕಗಳನ್ನು ಗಳಿಸಿದ್ದರೆ ಅಂತಹ ತರಬೇತಿದಾರರರಿಗೂ ಅಧಿಕಾರಿಗಳ ಹುದ್ದೆಗೆ ಭಡ್ತಿ ನೀಡಲಾಗುವುದು ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News