ಪಾಕ್‌ಗೆ ಅಮೆರಿಕ ರಕ್ಷಣಾ ನೆರವು ಮಿತಿ ಗಣನೀಯ ಇಳಿಕೆ

Update: 2018-08-02 15:25 GMT

ವಾಶಿಂಗ್ಟನ್, ಆ. 2: ಪಾಕಿಸ್ತಾನಕ್ಕೆ ನೀಡುವ ರಕ್ಷಣಾ ನೆರವನ್ನು ವರ್ಷಕ್ಕೆ 150 ಮಿಲಿಯ ಡಾಲರ್ (ಸುಮಾರು 1030 ಕೋಟಿ ರೂಪಾಯಿ)ಗೆ ಮಿತಿಗೊಳಿಸುವ ರಕ್ಷಣಾ ವೆಚ್ಚ ಮಸೂದೆಯನ್ನು ಅಮೆರಿಕದ ಸಂಸತ್ತು ಕಾಂಗ್ರೆಸ್ ಬುಧವಾರ ಅಂಗೀಕರಿಸಿದೆ.

ಇದಕ್ಕೂ ಮೊದಲು ಪಾಕಿಸ್ತಾನ ಅಮೆರಿಕದಿಂದ ವರ್ಷಕ್ಕೆ 1 ಬಿಲಿಯ ಡಾಲರ್ (ಸುಮಾರು 6,900 ಕೋಟಿ ರೂಪಾಯಿ)ಗೂ ಅಧಿಕ ಮೊತ್ತವನ್ನು ರಕ್ಷಣಾ ನೆರವಾಗಿ ಪಡೆದುಕೊಳ್ಳುತ್ತಿತ್ತು.

ಆದಾಗ್ಯೂ, ನೆರವು ವಿತರಣೆಗೆ ಹಕ್ಕಾನಿ ನೆಟ್‌ವರ್ಕ್ ವಿರುದ್ಧ ಅಥವಾ ಲಷ್ಕರೆ ತಯ್ಯಬ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಶರತ್ತುಗಳನ್ನು ಮಸೂದೆ ಕೈಬಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News