×
Ad

ಲವ್ ಜಿಹಾದ್‌ಗಾಗಿ ಹಿಂದೂ ಹುಡುಗಿಯರಿಗೆ ಆಮಿಷ:ರಾಜಸ್ಥಾನ ಬಿಜೆಪಿ ಶಾಸಕ ಅಹುಜಾ

Update: 2018-08-02 21:18 IST

ಆಲ್ವಾರ್,ಆ.2: ರಾಜಸ್ಥಾನದ ಬಿಜೆಪಿ ಶಾಸಕ ಜ್ಞಾನದೇವ ಅಹುಜಾ ಅವರು ಮತ್ತೊಮ್ಮೆ ತನ್ನ ಹೇಳಿಕೆಯ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ. ಲವ್ ಜಿಹಾದ್ ನೆಪದಲಿ ್ಲಹಿಂದು ಹುಡುಗಿಯರಿಗೆ ಆಮಿಷಗಳನ್ನು ಒಡ್ಡಲಾಗುತ್ತಿದೆ ಮತ್ತು ಅವರನ್ನು ಬಲವಂತದಿಂದ ಮತಾಂತರಗೊಳಿಸಲಾಗುತ್ತಿದೆ. ಹುಡುಗಿಯರನ್ನು ಅವರ ಮನೆಗಳಿಗೆ ಮರಳಿಸಲು ಈ ಜನರಿಗೆ ನಾನು ಸಮಯಾವಕಾಶವನ್ನು ನೀಡುತ್ತಿದ್ದೇನೆ. ಅವರು ಹಾಗೆ ಮಾಡದಿದ್ದರೆ ನಿಮ್ಮ ಹೆಣ್ಣುಮಕ್ಕಳೂ ಸುರಕ್ಷಿತರಾಗಿರುವುದಿಲ್ಲ ಎಂದು ಅವರಿಗೆ ನಾನು ಹೇಳುತ್ತಿದ್ದೇನೆ. ಅವರು ನಮ್ಮ ಹುಡುಗಿಯರನ್ನು ಮತಾಂತರಿಸಿ ತಪ್ಪು ಮಾಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಹುಜಾ ಹೇಳಿದರು.

ಗೋಹತ್ಯೆಯು ಭಯೋತ್ಪಾದನೆಗಿಂತ ದೊಡ್ಡ ಅಪರಾಧವಾಗಿದೆ ಎಂದು ಹೇಳುವ ಮೂಲಕ ಅಹುಜಾ ಇತ್ತೀಚಿಗಷ್ಟೇ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News