ಆ.4: ರಾಸುಗಳಿಗೆ ಸಾಮೂಹಿಕ ಜಂತುಹುಳ ನಿವಾರಣಾ ಕಾರ್ಯಕ್ರಮ

Update: 2018-08-03 11:47 GMT

ಮಂಗಳೂರು, ಆ.3: ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭ ಗಳಿಸಲು ರಾಸುಗಳಲ್ಲಿ ಇರುವ ಜಂತುಹುಳುಗಳನ್ನು ನಿರ್ಮೂಲನೆ ಮಾಡುವುದು ಅತ್ಯಾವಶ್ಯಕವೆಂದು ವೈಜ್ಞಾನಿಕ ಪರಿಶೀಲನೆಯಿಂದ ದೃಢೀಕರಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ರಾಸುಗಳಿಗೆ ಕಡ್ಡಾಯವಾಗಿ ಪ್ರತಿ ಆರು ತಿಂಗಳಿಗೊಮ್ಮೆ ಪಲ್ಸ್ ಪೋಲಿಯೊ ಮಾದರಿಯಲ್ಲಿ ಸಾಮೂಹಿಕವಾಗಿ ಜಂತುಹುಳ ನಿವಾರಕ ಔಷಧಿ ನೀಡುತ್ತಿದೆ.

ಆ.4ರಂದು 7ನೇ ಸುತ್ತಿನ ಸಾಮೂಹಿಕ ಜಂತುಹುಳ ನಿವಾರಣಾ ಕಾರ್ಯಕ್ರಮವು ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಸುಮಾರು 1,30,000 ಜಾನುವಾರುಗಳಿಗೆ ಹಾಗೂ 50,000 ಕರುಗಳಿಗೆ ಜಂತುಹುಳದ ಔಷಧಿಯನ್ನು ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳುವಂತೆ ಒಕ್ಕೂಟದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News