ಬಿ.ಎ. ಮೊಹಿದೀನ್‌ರ ಆತ್ಮಕಥನ ‘ನನ್ನೊಳಗಿನ ನಾನು’ ಹದಿನೈದೇ ದಿನಗಳಲ್ಲಿ ದ್ವಿತೀಯ ಮುದ್ರಣ

Update: 2018-08-03 13:06 GMT

ಮಂಗಳೂರು, ಆ.3: ಹಿರಿಯ ಮುತ್ಸದ್ದಿ, ಪ್ರಾಮಾಣಿಕ ರಾಜಕಾರಣಿಯಾಗಿದ್ದ ದಿವಂಗತ ಬಿ.ಎ. ಮೊಹಿದೀನ್‌ರ ಆತ್ಮಕಥನ ‘ನನ್ನೊಳಗಿನ ನಾನು’ ಹದಿನೈದೇ ದಿನಗಳಲ್ಲಿ ದ್ವಿತೀಯ ಮುದ್ರಣಗೊಂಡು ಕನ್ನಡ ಸಾಹಿತ್ಯ ಕ್ಷೇತ್ರದಲ್ಲೇ ದಾಖಲೆ ನಿರ್ಮಿಸಿದೆ.

ಈ ಕೃತಿಯ ಪ್ರಥಮ ಮುದ್ರಣವು ಕಳೆದ ಜುಲೈ 20ರಂದು ಮಂಗಳೂರಿನ ಪುರಭವನದಲ್ಲಿ ಬಿಡುಗಡೆಗೊಂಡಿತ್ತು. ರಾಜಕೀಯ ವಲಯದಲ್ಲಿ ಬಹಳಷ್ಟು ಸದ್ದು ಮಾಡಿರುವ ಈ ಆತ್ಮಕಥನವು ನಾಡಿನ ಸಾಹಿತಿಗಳು, ವಿಮರ್ಶಕರು, ರಾಜಕಾರಣಿಗಳ ನಡುವೆ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಗೊಳಗಾಗುತ್ತಿವೆ.

ಪ್ರಥಮ ಮುದ್ರಣದ 2,000 ಪ್ರತಿಗಳು ಈಗಾಗಲೇ ಮಾರಾಟಗೊಂಡಿದ್ದು, ಹದಿನೈದೇ ದಿನಗಳಲ್ಲಿ ಮತ್ತೆ 2,000 ಪ್ರತಿಗಳು ಮರು ಮುದ್ರಣಗೊಂಡಿವೆ. ಸದ್ಯದಲ್ಲೇ ಬೆಂಗಳೂರು ಹಾಗೂ ದುಬೈಯಲ್ಲಿ ಈ ಆತ್ಮಕಥನ ಬಿಡುಗಡೆಗೊಳ್ಳಲಿದೆ ಎಂದು ಕೃತಿಯ ನಿರೂಪಕರಾದ ಮುಹಮ್ಮದ್ ಕುಳಾಯಿ ಮತ್ತು ಬಿ.ಎ.ಮುಹಮ್ಮದ್ ಅಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News