ಪ್ರತಿಭಾ ಕಾರಂಜಿ: ಅಡ್ಡೂರು ಸರಕಾರಿ ಶಾಲೆಗೆ ಹಲವು ಪ್ರಶಸ್ತಿಗಳು

Update: 2018-08-04 10:21 GMT

ಅಡ್ಡೂರು, ಆ. 4: ನೀರುಮಾರ್ಗ ಸೈಂಟ್ ಲಿಗೋರಿಸ್ ಶಾಲೆಯಲ್ಲಿ ನಡೆದ ಗುರುಪುರ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬದ್ರಿಯಾ ನಗರ ಕ್ಲಸ್ಟರ್ ಗೆ ಒಳಪಟ್ಟ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಾಧನೆಗೈದು 23 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಕಿರಿಯರ ವಿಭಾಗದ ಸ್ಪರ್ಧೆಗಳಲ್ಲಿ ಪ್ರಥಮ 6 ಹಾಗೂ ಹಿರಿಯ ವಿಭಾಗದ ಸ್ಪರ್ಧೆಗಳಲ್ಲಿ ಪ್ರಥಮ 8, ದ್ವಿತೀಯ 3, ತೃತೀಯ 6 ಸ್ಥಾನಗಳನ್ನು ಗಳಿಸಿದ್ದಾರೆ.

ಕಿರಿಯರ ವಿಭಾಗ: ಪ್ರಥಮ: ಕ್ವಿಝ್ ನಲ್ಲಿ ಅಫ್ರಾ, ರಂಝೀನಾ, ನಿಹಾಲ, ಫರ್ಹಾ, ಶಿಫಾ, ಇಶ್ಮಾ, ಹಿರಿಯರ ವಿಭಾಗ: ಪ್ರಥಮ: ಸಿಂಚನಾ( ಸಂಸ್ಕೃತ ಧಾರ್ಮಿಕ ಪಠಣ), ತನ್ಸೀಫಾ ( ಆಶು ಭಾಷಣ), ಕೋಲಾಟದಲ್ಲಿ ಮೈಮನತುಲ್ ಅಫ್ರಿನಾ, ಸಿಂಚನಾ,  ಅಫ್ರಿನಾ ಬಾನು, ತನ್ಸೀಫಾ, ಶಾಝಾ ಮುರ್ಷಿದಾ, ಇಶ್ಮಾ, ದ್ವಿತೀಯ: ರುಬಿಯಾ (ಚಿತ್ರಕಲೆ), ಅಫ್ರಿನಾ ಬಾನು (ಸಂಸ್ಕೃತ ಕಂಠಪಾಟ), ಸಿಂಚನಾ( ಭಕ್ತಿ ಗೀತೆ), ತೃತೀಯ: ಜಾನಪದ: ಅಫ್ರಿನಾ, ತನ್ಸೀಫಾ, ಮೈಮನತುಲ್ ಅಫ್ರಿನಾ, ಶಾಝಾ ಮುರ್ಷಿದಾ, ಸಿಂಚನಾ, ಇಶ್ಮಾ, ಅವರು ವಿಜೇತರಾಗಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ಶಕುಂತಲಾ ಪ್ರಟನೆಯಲ್ಲಿ ತಿಳಿಸಿದ್ದಾರೆ.     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News