ಭಾರತೀಯ ಕಾನೂನು ಪಂಡಿತನಿಗೆ ‘ಲೆಟನ್ ಪ್ರಶಸ್ತಿ’
Update: 2018-08-04 20:09 IST
ಲಂಡನ್, ಆ. 4: ನಾರ್ವೆಯ ಲೆಟನ್ ಫೌಂಡೇಶನ್ ಆ್ಯಂಡ್ ಯಂಗ್ ಅಕಾಡೆಮಿ ಸ್ಥಾಪಿಸಿದ, ಯುವ ಸಂಶೋಧಕರಿಗೆ ಕೊಡುವ ಆರಂಭಿಕ ವರ್ಷದ ‘ಲೆಟನ್ ಪ್ರಶಸ್ತಿ’ಯನ್ನು ಭಾರತೀಯ ತರುನಾಭ್ ಖೇತಾನ್‌ರಿಗೆ ನೀಡಲಾಗಿದೆ.
ಡಿಸ್‌ಕ್ರಿಮಿನೇಶನ್ ಲಾ, ಕಾನ್‌ಸ್ಟಿಟ್ಯೂಶನಲ್ ಲಾ, ಲೀಗಲ್ ತಿಯರಿ, ಪೊಲಿಟಿಕಲ್ ಫಿಲಾಸಫಿ, ಡೆಮಾಕ್ರಟಿಕ್ ತಿಯರಿ, ಕಾನ್‌ಸ್ಟಿಟ್ಯೂಶನಲ್ ಡಿಸೈನ್ ಆ್ಯಂಡ್ ಎತಿಕ್ಸ್ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಅವರಿಗೆ ಈ ಪ್ರಶಸ್ತಿ ಒಲಿದಿದೆ.
ಜಗತ್ತಿನಾದ್ಯಂತದ 200ಕ್ಕೂ ಅಧಿಕ ಸಾಧಕರ ಪಟ್ಟಿಯಿಂದ ಅವರನ್ನು ಆರಿಸಲಾಗಿದೆ.
ಖೇತಾನ್ ಆಕ್ಸ್‌ಫರ್ಡ್ ಮತ್ತು ಮೆಲ್ಬರ್ನ್ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಪ್ರಶಸ್ತಿಯ ಜೊತೆ ಸಿಕ್ಕಿರುವ 2,60,000 ಡಾಲರ್ (ಸುಮಾರು 1.78 ಕೋಟಿ ರೂಪಾಯಿ) ಮೊತ್ತವನ್ನು ಮೆಲ್ಬರ್ನ್ ಲಾ ಸ್ಕೂಲ್‌ನಲ್ಲಿ ‘ಇಂಡಿಯನ್ ಇಕ್ವಾಲಿಟಿ ಲಾ ಪ್ರೋಗ್ರಾಮ್’ ಆರಂಭಿಸಲು ಬಳಸುತ್ತಾರೆ.