×
Ad

ಟ್ರಕ್ ಗಳ ಅಪಘಾತದಿಂದ ಸ್ಫೋಟ: 55 ಮಂದಿಗೆ ಗಾಯ, ಓರ್ವ ಮೃತ್ಯು

Update: 2018-08-06 20:19 IST

ರೋಮ್, ಆ.6: ಎರಡು ಟ್ರಕ್ ಗಳ ನಡುವೆ ನಡೆದ ಅಪಘಾತದಿಂದ ಭಾರೀ ಸ್ಫೋಟ ಸಂಭವಿಸಿದ್ದು, 55 ಮಂದಿ ಗಾಯಗೊಂಡಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇಟಲಿಯ ಬೊಲೊಗ್ನಾ ಏರ್ ಪೋರ್ಟ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅಪಘಾತ ತೀವ್ರತೆಗೆ ಉಂಟಾದ ಬೃಹತ್ ಬೆಂಕಿಯುಂಡೆಗಳ ದೃಶ್ಯಗಳನ್ನು ಹಲವರು ಸೆರೆಹಿಡಿದಿದ್ದಾರೆ. ಬೆಂಕಿ ಹೊತ್ತಿಕೊಳ್ಳಬಲ್ಲ ವಸ್ತುಗಳನ್ನು ಒಯ್ಯುತ್ತಿದ್ದ ಹಾಗು ಕಾರುಗಳನ್ನು ಒಯ್ಯುತ್ತಿದ್ದ ಟ್ರಕ್ ಗಳ ನಡುವೆ ನಡೆದ ಅಪಘಾತದಿಂದ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News