ಕ್ಯಾಲಿಫೋರ್ನಿಯದಲ್ಲಿ: ಸಿಖ್ ವ್ಯಕ್ತಿಗೆ ಹಲ್ಲೆ; ಜನಾಂಗೀಯ ನಿಂದನೆ

Update: 2018-08-06 15:14 GMT

ನ್ಯೂಯಾರ್ಕ್, ಆ. 6: ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಇಬ್ಬರು ಬಿಳಿಯ ವ್ಯಕ್ತಿಗಳು 50 ವರ್ಷದ ಸಿಖ್ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘‘ನಿನಗೆ ಇಲ್ಲಿ ಜಾಗವಿಲ್ಲ! ನಿನ್ನ ದೇಶಕ್ಕೆ ಹೊರಟು ಹೋಗು!’’ ಎಂಬುದಾಗಿ ಅವರು ಕಿರುಚಿದರು ಎಂದು ದೂರಲಾಗಿದೆ.

ಪೊಲೀಸರು ಈ ಘಟನೆಯನ್ನು ‘ಹೇಯ’ ದ್ವೇಷಾಪರಾಧವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.

ಕ್ಯಾಲಿಫೋರ್ನಿಯದ ಕೂಡು ರಸ್ತೆಯೊಂದರ ಸಮೀಪ ಕಳೆದ ವಾರ ಈ ಘಟನೆ ಸಂಭವಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ‘ದ ಸ್ಯಾಕ್ರಮೆಂಟೊ ಬೀ’ ಪತ್ರಿಕೆ ವರದಿ ಮಾಡಿದೆ.

ದುಷ್ಕರ್ಮಿಗಳು ಕಬ್ಬಿಣದ ರಾಡ್‌ನಿಂದ ಸಿಖ್ ವ್ಯಕ್ತಿಯ ತಲೆಗೆ ಬಡಿದರು ಎಂದು ಪೊಲೀಸರು ಹೇಳಿದ್ದಾರೆ. ಆದಾಗ್ಯೂ, ಅವರು ತಲೆಯಲ್ಲಿ ಪೇಟ ಧರಿಸಿದ್ದುದರಿಂದ ಗಂಭೀರ ಗಾಯದಿಂದ ತಪ್ಪಿಸಿಕೊಂಡಿದ್ದಾರೆ.

ದುಷ್ಕರ್ಮಿಗಳನ್ನು ಅಥವಾ ಘಟನೆಯ ಪ್ರತ್ಯಕ್ಷದರ್ಶಿಗಳನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಗಳನ್ನು ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News