ಶಿಕಾಗೊದಲ್ಲಿ: ಸರಣಿ ಗುಂಡು ಹಾರಾಟ: 44 ಮಂದಿಗೆ ಗುಂಡು; 5 ಸಾವು

Update: 2018-08-06 15:16 GMT

ಶಿಕಾಗೊ (ಅಮೆರಿಕ), ಆ. 6: ಅಮೆರಿಕದ ಶಿಕಾಗೊ ನಗರದಲ್ಲಿ ರವಿವಾರ ನಡೆದ ಸರಣಿ ಗುಂಡು ಹಾರಾಟ ಘಟನೆಗಳಲ್ಲಿ ಐವರು ಮೃತಪಟ್ಟಿದ್ದಾರೆ ಹಾಗೂ 39 ಮಂದಿ ಗಾಯಗೊಂಡಿದ್ದಾರೆ.

ಒಟ್ಟು 44 ಜನರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಶಿಕಾಗೊ ಗಸ್ತು ಪೊಲೀಸ್ ಮುಖ್ಯಸ್ಥ ಫ್ರೆಡ್ ವಾಲ್ಟರ್ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು. ಈ ಪೈಕಿ ಕೆಲವರಿಗೆ ಗ್ಯಾಂಗ್ ಸಂಬಂಧಿ ಕಾರಣಗಳಿಗಾಗಿ ನಿರ್ದಿಷ್ಟವಾಗಿ ಗುಂಡುಹಾರಿಸಲಾಗಿದೆ.

‘‘ಶಿಕಾಗೊ ನಗರ ಹಿಂಸಾತ್ಮಕ ರಾತ್ರಿಯೊಂದನ್ನು ಕಂಡಿದೆ. ಒಟ್ಟಾರೆ ದಾಳಿಯಾಗಲಿ, ಗುರಿಯಿಟ್ಟು ನಡೆಸುವ ದಾಳಿಯಾಗಲಿ, ನಮ್ಮ ರಸ್ತೆಗಳಲ್ಲಿ ನಡೆಯುವ ಯಾವುದೇ ದಾಳಿಗಳು ಸ್ವೀಕಾರಾರ್ಹವಲ್ಲ’’ ಎಂದು ಶಿಕಾಗೊ ಪೊಲೀಸ್ ಮುಖ್ಯಸ್ಥರು ಹೇಳಿದರು.

ಶನಿವಾರ ಮಧ್ಯರಾತ್ರಿಯಿಂದ ರವಿವಾರ ಮಧ್ಯಾಹ್ನ 2 ಗಂಟೆವರೆಗೆ ಹಲವು ಗುಂಡು ಹಾರಾಟ ಘಟನೆಗಳು ನಡೆದಿವೆ ಎಂದು ಸಿಎನ್‌ಎನ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News