ಎನ್‌ಸಿಬಿಸಿಗೆ ಸಾಂವಿಧಾನಿಕ ಸ್ಥಾನ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ

Update: 2018-08-06 17:41 GMT

ಹೊಸದಿಲ್ಲಿ, ಆ. 6: ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನ ನೀಡುವ ಮಸೂದೆಯನ್ನು ಸೋಮವಾರ ರಾಜ್ಯ ಸಭೆಯಲ್ಲಿ ಅಂಗೀಕರಿಸಲಾಯಿತು.

 ಈ ಹಿಂದೆ ರಾಜ್ಯಸಭೆಯಲ್ಲಿ ತಿದ್ದುಪಡಿ ರದ್ದುಗೊಂಡು ಲೋಕಸಭೆಯಲ್ಲಿ ಆಗಸ್ಟ್ 2ರಂದು ಅಂಗೀಕಾರಗೊಂಡ 2017ರ ಸಾಂವಿಧಾನಿಕ (123ನೇ ತಿದ್ದುಪಡಿ) ಮಸೂದೆ ಚರ್ಚೆ ಸಂದರ್ಭ ಈ ಬೇಡಿಕೆ ಕೇಳಿ ಬಂದಿತ್ತು. ಇಂದು ಲೋಕಸಭೆ ಮಾಡಿದ ತಿದ್ದುಪಡಿಯೊಂದಿಗೆ ಮಸೂದೆಯನ್ನು ರಾಜ್ಯಸಭೆ ಅಂಗೀಕರಿಸಿತು. ಒಟ್ಟು ಸದಸ್ಯರಲ್ಲಿ ಮೂರನೇ ಎರಡು ಬಹುಮತದೊಂದಿಗೆ ಮಸೂದೆ ಅಂಗೀಕಾರಗೊಂಡಿತು. ಕಳೆದ ವರ್ಷ ಜುಲೈ 31ರಂದು ರಾಜ್ಯ ಸಭೆ ತಿದ್ದುಪಡಿಯೊಂದಿಗೆ ಈ ಮಸೂದೆ ಅಂಗೀಕರಿಸಿತ್ತು ಹಾಗೂ ಕೆಳಮನೆಗೆ ಕಳುಹಿಸಿಕೊಟ್ಟಿತ್ತು. ಮೂರನೇ ಎರಡು ಬಹುಮತದೊಂದಿಗೆ ಪರ್ಯಾಯ ತಿದ್ದುಪಡಿ ಹಾಗೂ ಏಕಪಕ್ಷೀಯವಾಗಿ ಇನ್ನಷ್ಟು ಬದಲಾವಣೆಗಳೊಂದಿಗೆ ಲೋಕಸಭೆ ಕಳೆದ ವಾರ ಮಸೂದೆಯನ್ನು ಅಂಗೀಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News