×
Ad

ನ್ಯಾ.ಜೋಸೆಫ್ ಸೇವಾ ಹಿರಿತನ ವಿವಾದ: ಅಟಾರ್ನಿ ಜನರಲ್‌ರನ್ನು ಭೇಟಿಯಾದ ಮು.ನ್ಯಾ.ಮಿಶ್ರಾ

Update: 2018-08-06 23:33 IST

ಹೊಸದಿಲ್ಲಿ, ಆ.6: ನ್ಯಾ.ಕೆ.ಎಂ.ಜೋಸೆಫ್ ಅವರನ್ನು ಕಳೆದ ವಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಳಿಸುವಾಗ ಸರಕಾರವು ಅವರ ಸೇವಾ ಹಿರಿತನವನ್ನು ಬದಲಿಸಿದೆ ಎಂಬ ಆರೊಪಗಳ ನಡುವೆಯೇ ಸೋಮವಾರ ಭಾರತದ ಮುಖ್ಯ ನ್ಯಾಯಾಧೀಶ ದೀಪಕ ಮಿಶ್ರಾ ಅವರು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರನ್ನು ಭೇಟಿಯಾಗಿದ್ದರು.

 ಇದಕ್ಕೂ ಮುನ್ನ ಬೆಳಿಗ್ಗೆ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರು ಸಭೆ ಸೇರಿ ಇತ್ತೀಚಿನ ನ್ಯಾಯಾಧೀಶರ ನೇಮಕಾತಿಗಳ ಬಗ್ಗೆ ಚರ್ಚಿಸಿದ್ದರು.

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ,ವಿನೀತ ಸರನ್ ಮತ್ತು ಕೆ.ಎಂ.ಜೋಸೆಫ್ ಅವರನ್ನು ನೇಮಕಗೊಳಿಸಿ ಆ.3ರಂದು ಸರಕಾರವು ಹೊರಡಿಸಿರುವ ಅಧಿಸೂಚನೆಯಲ್ಲಿ ಜೋಸೆಫ್ ಅವರ ಹೆಸರನ್ನು ಉಳಿದ ಇಬ್ಬರ ಹೆಸರುಗಳ ಕೆಳಗೆ ನಮೂದಿಸಿದೆ. ಹೀಗಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸೇವಾ ಹಿರಿತನದ ಪಟ್ಟಿಯಲ್ಲಿ ನ್ಯಾಯಮೂರ್ತಿಗಳಾದ ಬ್ಯಾನರ್ಜಿ ಮತ್ತು ಸರನ್ ಅವರಿಗೆ ನ್ಯಾ.ಜೋಸೆಫ್ ಅವರಿಗಿಂತ ಮೇಲಿನ ಸ್ಥಾನ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News