ವಿವಾಹವಾಗಲು ಪರೋಲ್: ಅಬು ಸಲೀಂ ಮನವಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್
Update: 2018-08-07 22:55 IST
ಹೊಸದಿಲ್ಲಿ, ಆ. 7: ವಿವಾಹವಾಗಲು 1993ರ ಸರಣಿ ಸ್ಫೋಟದ ಅಪರಾಧಿ ಅಬು ಸಲೀಂ ಸಲ್ಲಿಸಿದ ಪರೋಲ್ ಮನವಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ. ಮುಂಬ್ರಾದ ನಿವಾಸಿ ಕೌಸರ್ ಬಾಹರ್ ಅವರನ್ನು ವಿವಾಹವಾಗಲು 45 ದಿನಗಳ ಪರೋಲ್ ಕೋರಿ ಸಲೀಂ ಅವರು ಬಾಂಬೆ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದ. ಭದ್ರತೆ ಹಿನ್ನೆಲೆಯಲ್ಲಿ ಸಲೀಂ ನ ಮನವಿಯನ್ನು ಪ್ರಾಧಿಕಾರ ಎಪ್ರಿಲ್‌ನಲ್ಲಿ ತಿರಸ್ಕರಿಸಿತ್ತು. ಪರೋಲ್ ನೀಡಲು ನಿರಾಕರಿಸಿರುವುದನ್ನು ಪ್ರಶ್ನಿಸಿ ತಲೋಜಾ ಜೈಲಿನಲ್ಲಿರುವ ಸಲೀಂ ಬಾಂಬೆ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದ. ಕೋಂಕಣ್ ವಿಭಾಗೀಯ ಆಯುಕ್ತ ಹಾಗೂ ಮೇಲ್ಮನವಿ ಪ್ರಾಧಿಕಾರ ಮನವಿ ತಿರಸ್ಕರಿಸಿದೆ ಎಂದು ಸಲೀಂ ಪರ ನ್ಯಾಯವಾದಿ ಪರ್ಹಾನ ಶಾಹ್ ಹೇಳಿದ್ದಾರೆ.