×
Ad

ರಾವೊನಿಕ್ ಶುಭಾರಂಭ

Update: 2018-08-07 23:47 IST

ಟೊರಾಂಟೊ, ಆ.7: ಕೆನಡಾದ ಮಿಲೊಸ್ ರಾವೊನಿಕ್ ರೋಜರ್ಸ್ ಕಪ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಸೋಮವಾರ ನಡೆದ ಪುರುಷರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ರಾವೊನಿಕ್ ಬೆಲ್ಜಿಯಂನ ಡೇವಿಡ್ ಗೊಫಿನ್‌ರನ್ನು 6-3, 6-4 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.

ಕಳೆದ ಋತುವಿನಲ್ಲಿ ಪದೇ ಪದೇ ಗಾಯದ ಸಮಸ್ಯೆಗೆ ಒಳಗಾಗಿದ್ದ ರಾವೊನಿಕ್ ನಂ.3ನೇ ಸ್ಥಾನದಿಂದ 30ನೇ ಸ್ಥಾನಕ್ಕೆ ಕುಸಿದಿದ್ದಾರೆ. ರಾವೊನಿಕ್ ಮುಂದಿನ ಸುತ್ತಿನಲ್ಲಿ ಅಮೆರಿಕದ ಫ್ರಾನ್ಸಸ್ ಟಿಯಾಫೊಯ್ ಹಾಗೂ ಇಟಲಿಯ ಮಾರ್ಕೊ ಸೆಕಿನಾಟೊರನ್ನು ಎದುರಿಸಲಿದ್ದಾರೆ. ಮತ್ತೊಂದು ಮೊದಲ ಸುತ್ತಿನ ಪಂದ್ಯದಲ್ಲಿ ರಶ್ಯದ ಕ್ವಾಲಿಫೈಯರ್ ಡಾನಿಲ್ ಮೆಡ್ವೆಡೆವ್ ಅಮೆರಿಕದ ಜಾಕ್ ಸಾಕ್‌ರನ್ನು 6-3, 3-6, 6-3 ಸೆಟ್‌ಗಳಿಂದ ಸೋಲಿಸಿ ಶಾಕ್ ನೀಡಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ನೊವಾಕ್ ಜೊಕೊವಿಕ್ ಹಾಗೂ ಕೆವಿನ್ ಆ್ಯಂಡರ್ಸನ್ ಕೆನಡಾದ ಯುವ ಆಟಗಾರರಾದ ಡೆನಿಸ್ ಶಪೊವಾಲೊವ್ ಹಾಗೂ ಫೆಲಿಕ್ಸ್ ಅಲಿಯಸ್ಸಿಮ್‌ರನ್ನು 6-3, 6-2 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.

ಸ್ಪೇನ್‌ನ ರಫೆಲ್ ನಡಾಲ್ ಟೂರ್ನಮೆಂಟ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ. ವಾಶಿಂಗ್ಟನ್‌ನಲ್ಲಿ ಸಿಟಿ ಓಪನ್ ಚಾಂಪಿಯನ್‌ಶಿಪ್ ಜಯಿಸಿರುವ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಎರಡನೇ ಶ್ರೇಯಾಂಕ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News