ಗಾಳಿಯಿಂದ ಚಲಿಸುವ ಕಾರು ವಿನ್ಯಾಸಗೊಳಿಸಿದ ವಿದ್ಯಾರ್ಥಿಗಳು

Update: 2018-08-09 13:15 GMT

ಕೈರೋ, ಆ. 9: ಇಂಧನದ ಬದಲು ಗಾಳಿಯಿಂದ ಚಲಿಸುವ ಕಾರೊಂದನ್ನು ಈಜಿಪ್ಟ್ ನ ವಿದ್ಯಾರ್ಥಿಗಳ ಒಂದು ತಂಡ ವಿನ್ಯಾಸಗೊಳಿಸಿದೆ.

ಕೈರೋದ ಹೊರವಲಯದ ಹೆಲ್ವಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡವು ತಮ್ಮ ಪದವಿ ಕೋರ್ಸಿನ ಪ್ರಾಜೆಕ್ಟ್ ಭಾಗವಾಗಿ ಈ ವಿಶಿಷ್ಟ ಗಾಳಿ ಉಪಯೋಗಿಸಿ ಚಲಿಸುವ ವಾಹನ ಸಿದ್ಧಪಡಿಸಿದೆ.

ಈ ಗೋ-ಕಾರ್ಟ್ ಮಾದರಿಯ ವಾಹನವು ಈಜಿಪ್ಟ್ ದೇಶವು ಇಂಧನ ಸಬ್ಸಿಡಿಗಳಲ್ಲಿ ಬಹಲಷ್ಟು ಕಡಿತಗಳನ್ನು ಎದುರಿಸುತ್ತಿರುವಂತಹ ಸಂದರ್ಭದಲ್ಲಿ ಬಂದಿದೆ. ಈ ಕಾರು ನಿರ್ಮಿಸಲು ವಿದ್ಯಾರ್ಥಿಗಳಿಗೆ ತಗಲಿದ ವೆಚ್ಚ ಸುಮಾರು 18,000 ಈಜಿಪ್ಟಿಯನ್ ಪೌಂಡ್ (1,008.40 ಡಾಲರ್) ಆಗಿದೆ. ಈ ವಾಹನಕ್ಕೆ ನಿರ್ವಹಣಾ ವೆಚ್ಚವೇ ಇಲ್ಲ. ಅದಕ್ಕೆ ಕಂಪ್ರೆಸ್ಡ್ ಗಾಳಿಯ ಅಗತ್ಯವಿದೆಯಷ್ಟೇ, ವಾಹನ ತಂಪಾಗಿಸುವ ಅಗತ್ಯವೂ ಇಲ್ಲ ಎಂದು ಈ ವಾಹನ ವಿನ್ಯಾಸಗೊಳಿಸಿದ ತಂಡದ ವಿದ್ಯಾರ್ಥಿ ಮೊಹಮೂದ್ ಯಾಸೆರ್ ಹೇಳಿದ್ದಾರೆ. ಸದ್ಯ ಈ ವಾಹನ ಗಂಟೆಗೆ 40 ಕಿಮೀ ವೇಗದಲ್ಲಿ ಸಂಚರಿಸಬಹುದಾಗಿದ್ದು ಪ್ರತಿ 30 ಕಿಮೀ ಪ್ರಯಾಣದ ನಂತರ ಕಂಪ್ರೆಸ್ಡ್ ಗಾಳಿ ತುಂಬಿಸುವ ಅಗತ್ಯವಿದೆ.

ಈ ಮಾದರಿಯ ವಾಹನಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲು ಹಣ ಸಂಗ್ರಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ತಂಡ ಯೋಚಿಸುತ್ತಿದೆ. ಈ ವಾಹನ ಗಂಟೆಗೆ 100 ಕಿಮೀ ವೇಗದಲ್ಲಿ ಸಂಚರಿಸುವಂತೆ ಮಾಡುವ ಉದ್ದೇಶವೂ ತಂಡಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News