ಚತ್ತೀಸ್‌ಗಢ: ಮಾವೋವಾದಿಗಳಿಂದೆ 2 ಬಸ್‌ಗಳಿಗೆ ಬೆಂಕಿ

Update: 2018-08-09 15:13 GMT

ರಾಯಪುರ, ಆ. 9: ರಾಯಪುರದಿಂದ 450 ಕಿ.ಮೀ. ದಕ್ಷಿಣಕ್ಕಿರುವ ದಾಂತೆವಾಡ ಜಿಲ್ಲೆಯ ಬಚೇಲಿ-ಜಗ್ದಲ್ಪುರ್ ರಸ್ತೆಯಲ್ಲಿ ಮಾವೋವಾದಿಗಳು ಬುಧವಾರ ಮಧ್ಯ ರಾತ್ರಿ ಎರಡು ಪ್ರಯಾಣಿಕರ ಬಸ್ಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ.

 ಇದಲ್ಲದೆ ಸರಕು ಸಾಗಾಟದ ಟ್ರಕ್‌ಗಳಿಗೆ ಕೂಡ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ತಡೆದು ನಿಲ್ಲಿಸಿದ ಮಾವೋವಾದಿಗಳು ಅದರಲ್ಲಿದ್ದ ಜನರನ್ನು ಕೆಳಗೆ ಇಳಿಸಿ ಬೆಂಕಿ ಹಚ್ಚಿದರು. ಬಸ್ಸು ರಾಜ್ಯ ರಾಜಧಾನಿಗೆ ತೆರಳುತ್ತಿತ್ತು. ದಾಂತೆವಾಡ ಹಾಗೂ ಸುಕ್ಮಾ ಜಿಲ್ಲೆಯಲ್ಲಿ ಜುಲೈ 19 ಹಾಗೂ ಆಗಸ್ಟ್ 6ರಂದು ನಡೆಸಲಾದ ಎನ್‌ಕೌಂಟರ್ ವಿರೋಧಿಸಿ ಮಾವೋ ವಾದಿಗಳು ಪೋಸ್ಟರ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸುತ್ತಿರುವುದನ್ನು ಪ್ರಯಾಣಿಕರು, ಚಾಲಕ ಹಾಗೂ ನಿರ್ವಾಹಕ ಅಸಹಾಯಕರಾಗಿ ನೋಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News