ಎನ್‌ಸಿಡಬ್ಲು ಅಧ್ಯಕ್ಷೆಯಾಗಿ ರೇಖಾ ಶರ್ಮಾ ನೇಮಕ

Update: 2018-08-09 15:16 GMT

ಹೊಸದಿಲ್ಲಿ, ಆ. 9: ಚರ್ಚ್‌ಗಳಲ್ಲಿ ‘ತಪ್ಪೊಪ್ಪಿಗೆ’ ನಿಷೇಧಿಸಬೇಕು ಎಂಬ ಸಲಹೆ ನೀಡುವ ಮೂಲಕ ಇತ್ತೀಚೆಗೆ ವಿವಾದಕ್ಕೆ ಒಳಗಾಗಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ರೇಖಾ ಶರ್ಮಾ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನಿಯೋಜಿತರಾಗಿದ್ದಾರೆ. 54ರ ಹರೆಯದ ಶರ್ಮಾ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿದ್ದರು.

 ಕಳೆದ ವರ್ಷ ಲಲಿತಾ ಕುಮಾರಮಂಗಳಂ ರಾಜೀನಾಮೆ ಸಲ್ಲಿಸಿದ ಬಳಿಕ ಅವರು ಅಧ್ಯಕ್ಷ ಸ್ಥಾನದ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಿದ್ದರು. ಅವರು ಹರ್ಯಾಣ ರಾಜ್ಯದವರು. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಅವರು ದೇಶಾದ್ಯಂತದ ಮನೋವೈದ್ಯಕೀಯ ಸಂಸ್ಥೆ, ಕಸ್ಟೋಡಿಯಲ್ ಹೋಮ್‌ಗಳ ಪರಿಶೀಲನೆ ನಡೆಸಿದ್ದಾರೆ ಹಾಗೂ ಈ ಸಂಸ್ಥೆಗಳಲ್ಲಿ ದಾಖಲಿಸಲಾದ ಮಹಿಳೆಯರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಹೇಳಿಕೆ ತಿಳಿಸಿದೆ. ನೇಮಕದ ಕುರಿತು ಪ್ರತಿಕ್ರಿಯಿಸಿರುವ ಶರ್ಮಾ, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷ ಹುದ್ದೆಯ ಅಧಿಕಾರವನ್ನು ಮಹಾನ್ ಗೌರವ, ಕರ್ತವ್ಯದ ದೃಷ್ಟಿಯಿದ ಸ್ವೀಕರಿಸುತ್ತಿದ್ದೇನೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News