ಬಂಟ್ವಾಳ: ತಗ್ಗಿದ ನೇತ್ರಾವತಿ ನೀರಿನ ಮಟ್ಟ

Update: 2018-08-10 06:52 GMT
ತುಂಬೆ ಡ್ಯಾಂ

ಬಂಟ್ವಾಳ,ಆ.10: ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ನೇತ್ರಾವತಿ ನದಿ ಹಠಾತ್ತಾಗಿ ಉಕ್ಕಿ ಹರಿದ ಪರಿಣಾಮ ಬಂಟ್ವಾಳ ತಾಲೂಕು ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ನುಗ್ಗಿದ ನೀರು ಶುಕ್ರವಾರ ಇಳಿಮುಖವಾಗಿದೆ. ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದ ನೇತ್ರಾವತಿ ಸದ್ಯ ಶಾಂತವಾಗಿದ್ದು, ಪ್ರವಾಹ ತಗ್ಗಿದೆ.

ಕಳೆದ ಕೆಲವು ದಿನಗಳಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿದ ನೇತ್ರಾವತಿ ನದಿ ನೀರಿನಲ್ಲಿ ಗುರುವಾರ ಹಠಾತ್ ಏರಿಕೆ ಕಂಡುಬಂದಿತ್ತು. ರಾತ್ರಿ ಬೆಳಗಾಗುವುದರೊಳಗೆ ಅಪಾಯಮಟ್ಟದಲ್ಲಿ ನೇತ್ರಾವತಿ ಹರಿಯಲಾರಂಭಿಸಿದ ಪರಿಣಾಮ ಗುರುವಾರ ಬಂಟ್ವಾಳ ತಾಲೂಕು ವ್ಯಾಪ್ತಿಯ ವಿವಿಧೆಡೆ ಮನೆಗಳಿಗೆ ಹಾಗೂ ರಸ್ತೆಗಳಿಗೆ ನೀರು ನುಗಿತ್ತು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಸದ್ಯ ನೆರೆ ಇಳಿದಿದ್ದು, ನೇತ್ರಾವತಿ ನದಿಯು 6.4 ಮೀ. ನೀರಿನ ಮಟ್ಟದಲ್ಲಿ ಹರಿಯುತ್ತಿದೆ. ತುಂಬೆ ಡ್ಯಾಂನಲ್ಲಿ 7 ಮೀ.ನಷ್ಟು ನೀರನ್ನು ಕಾಯ್ದಿರಿಸಿ, ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.

ನೇತ್ರಾವತಿ ನದಿಯಲ್ಲಿ ಪ್ರವಾಹ ತಗ್ಗಿದ್ದರೂ ಶುಕ್ರವಾರ ಬೆಳಗ್ಗೆಯಿಂದ ಬಂಟ್ವಾಳ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News