ಪೂಂಜಾಲಕಟ್ಟೆ ಮಸೀದಿಯ ಆವರಣ ಗೋಡೆ ಕುಸಿತ

Update: 2018-08-10 11:32 GMT

ಬಂಟ್ವಾಳ, ಆ.10: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಪೂಂಜಾಲಕಟ್ಟೆ ಪೇಟೆಯಲ್ಲಿರುವ ಬದ್ರಿಯಾ ಜುಮಾ ಮಸೀದಿಯ ಆವರಣ ಗೋಡೆ ಕುಸಿದ ಘಟನೆ ಗುರುವಾರ ನಡೆದಿದೆ.

ಆವರಣ ಗೋಡೆ ಸಹಿತ ಮಣ್ಣು ಕುಸಿದು ಹಾನಿ ಸಂಭವಿಸಿದೆ. ಇದಲ್ಲದೆ ಆವರಣ ಗೋಡೆಯುದ್ದಕ್ಕೂ ಬಿರುಕು ಕಾಣಿಸಿಕೊಂಡಿದ್ದು, ಸಂಪೂರ್ಣವಾಗಿ ಕುಸಿಯುವ ಭೀತಿ ಎದುರಾಗಿದೆ. ಇದರಿಂದ ಸುಮಾರು 7 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. 

ಶುಕ್ರವಾರವೂ ಆವರಣ ಗೋಡೆಯಲ್ಲಿ ಕುಸಿತ ಕಾಣಿಸಿದ್ದು, ಅಪಾರ ಹಾನಿ ಸಂಭವಿಸಿದೆ. 

ಸ್ಥಳಕ್ಕೆ ಜಿಪಂ ಸದಸ್ಯ ಎಂ.ತುಂಗಪ್ಪ ಬಂಗೇರ, ಮಡಂತ್ಯಾರು ಗ್ರಾಪಂ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News