ಲಾರ್ಡ್ಸ್ ಟೆಸ್ಟ್ ನಲ್ಲಿ ಎರಡನೇ ದಿನವೂ ಮಳೆಯಾಟ

Update: 2018-08-10 18:27 GMT

ಲಾರ್ಡ್ಸ್, ಆ. 10: ಇಂಗ್ಲೆಂಡ್ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತದ ಬ್ಯಾಟಿಂಗ್‌ಗೆ ಮಳೆ ಅಡ್ಡಿಪಡಿಸಿದ್ದು, ಟೀಮ್ ಇಂಡಿಯಾ ಪಂದ್ಯದ ಎರಡನೇ ದಿನ ಕಳಪೆ ಪ್ರದರ್ಶನ ನೀಡಿದೆ.

 ಮೊದಲ ದಿನದ ಆಟ ಮಳೆಯಿಂದಾಗಿ ಕೊಚ್ಚಿ ಹೋಗಿತ್ತು. ಎರಡನೇ ದಿನವೂ ಮಳೆಯಾಟ ಮುಂದುವರಿದಿದೆ. 8.3 ಓವರ್ ಮುಕ್ತಾಯಕ್ಕೆ ಭಾರತ 3 ವಿಕೆಟ್ ನಷ್ಟದಲ್ಲಿ 15 ರನ್ ಗಳಿಸಿದೆ.

ನಾಯಕ ವಿರಾಟ್ ಕೊಹ್ಲಿ ಔಟಾಗದೆ 3 ರನ್ ಗಳಿಸಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಟೀಮ್ ಇಂಡಿಯಾದ ಬ್ಯಾಟಿಂಗ್ ಕಳಪೆಯಾಗಿದೆ.

ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ಎರಡು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಆರಂಭಿಕ ದಾಂಡಿಗರಾದ ಮುರಳಿ ವಿಜಯ್ (0) ಮತ್ತು ಲೋಕೇಶ್ ರಾಹುಲ್ 8 ರನ್ ಗಳಿಸಿ ಜೇಮ್ಸ್ ಆ್ಯಂಡರ್ಸನ್‌ಗೆ ವಿಕೆಟ್ ಒಪ್ಪಿಸಿದರು. ಮಳೆಯಿಂದಾಗಿ ತಡವಾಗಿ ಆಟ ಆರಂಭಗೊಂಡಿತ್ತು.

 ತಂಡದ ಸ್ಕೋರ್ 6.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 10 ರನ್ ಆಗಿದ್ದಾಗ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತು. ಮತ್ತೆ ಆಟ ಆರಂಭಗೊಂಡಾಗ ತಂಡದ ಇನ್ನೊಂದು ವಿಕೆಟ್ ಉರುಳಿತು. 8.3ನೇ ಓವರ್‌ನಲ್ಲಿ ಅನಗತ್ಯವಾಗಿ ರನ್ ಕದಿಯಲು ಹೋದ ಪೂಜಾರ ರನೌಟಾದರು. 25 ಎಸೆತಗಳನ್ನು ಎದುರಿಸಿದರೂ ಪೂಜಾರ 1 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಮತ್ತೆ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News