ಬಂಟ್ವಾಳ: ಆಟಿ ಅಮವಾಸ್ಯೆಯ ಪ್ರಯುಕ್ತ ತೀರ್ಥಸ್ನಾನ

Update: 2018-08-11 06:32 GMT

ಬಂಟ್ವಾಳ, ಆ. 11: ನರಹರಿ ಶ್ರೀ ಸದಾಶಿವ ದೇವಸ್ಥಾನ ಹಾಗೂ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಶನಿವಾರ ಆಟಿ ಅಮವಾಸ್ಯೆಯ ಪ್ರಯುಕ್ತ ತೀರ್ಥಸ್ನಾನ ನಡೆಯಿತು.

ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ನರಹರಿ ಶ್ರೀ ಸದಾಶಿವ ದೇವಸ್ಥಾನ  ಶಂಕ, ಚಕ್ರ, ಗದಾ, ಪದ್ಮ ನಾಲ್ಕು ಕೆರೆಗಳಲ್ಲಿ ಮಿಂದು ಬಳಿಕ ಸರತಿ ಸಾಲಿನಲ್ಲಿ ನಿಂತು ಭಕ್ತಾದಿಗಳು ಪೂಜೆ ಸಲ್ಲಿಸಿದರು. ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಶಿವ ಪಾರ್ವತಿ ದೇವಾಲಯದ ಪ್ರವೇಶದ ಮೊದಲು ಭಕ್ತಾಧಿಗಳು ಸಾಲು ಸಾಲಾಗಿ ಬಂದು ಕಾರಿಂಜ ಕೆರೆಯಲ್ಲಿ ಬಾಗಿನ ಅರ್ಪಿಸಿ ಬಳಿಕ ಸ್ನಾನ ಮಾಡಿ ದೇವರ ದರ್ಶನ ಪಡೆದರು.

ಹೊಸದಾಗಿ ಮದುವೆಯಾದ ಗಂಡಹೆಂಡತಿಯವರು ಆಟಿ ಅಮಾವಾಸ್ಯೆ ದಿನ ಎರಡು ದೇವಸ್ಥಾನಗಳಿಗೆ ಭೇಟಿ ನೀಡಿ ಸ್ನಾನ ಮಾಡಿ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷವಾಗಿದೆ. ಮದುವೆಯಾಗದವರು ಹರಕೆ ಹೊತ್ತು ಇಲ್ಲಿಗೆ ಆಗಮಿಸುತ್ತಾರೆ, ಉಬ್ಬಸ ಕೆಮ್ಮು ದಮ್ಮು, ಕಜ್ಜಿ-ವ್ಯಾದಿಗಳ ನಿವಾರಣೆಗೆ ಎರಡು ದೇವಸ್ಥಾನಗಳಿಗೆ ಹಗ್ಗ ಹಾಗೂ ಎಣ್ಣೆ ಹುರುಳಿ ಕಾಳನ್ನು ಹರಕೆಯಾಗಿ ನೀಡುತ್ತಾರೆ.

ಎರಡು ಕ್ಷೇತ್ರಗಳು ಇಂದು ಮುಂಜಾನೆಯಿಂದಲೇ ಜನಜಂಗುಲಿಯಿಂದ ಕೂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News